ರಸ್ತೆ ಅಫಘಾತಕ್ಕೆ ಹೆಡ್ ಕಾನ್ಸ್ ಟೇಬಲ್ ಬಲಿ

Spread the love

ರಸ್ತೆ ಅಫಘಾತಕ್ಕೆ ಹೆಡ್ ಕಾನ್ಸ್ ಟೇಬಲ್ ಬಲಿ

ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ಪೋಲಿಸ್ ಕಾನ್ಸ್ ಟೇಬಲ್ ಒರ್ವರು ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಡಿಕ್ಕಿ ಹೊಡೆದು ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮೇಲ್ಕಾರ್ ಬಳಿ ನಡೆದಿದೆ.

police-constable-banwal

ಬಂಧಿತರನ್ನು ಕಲ್ಲಡ್ಕ ಸಮೀಪದ ಪೊರ್ಲಿಪಾಡಿ ನಿವಾಸಿ ಪುತ್ತೂರು ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ರುಕ್ಮಯ (48)ಎಂದು ಗುರುತಿಸಲಾಗಿದೆ.

ಕೆಲಸ ನಿಮಿತ್ತ ಮಧ್ಯಾಹ್ನದ ವೇಳೆಗೆ ಮೇಲ್ಕಾರ್ಗೆ ಬಂದಿದ್ದ ಅವರು ಕೆಲಸ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಮನೆಗೆ ಹೋಗಲು ರಸ್ತೆ ಬದಿ ಕಾಯುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ, ಇಬ್ಬರು ಪುತ್ರರನ್ನು ಆಗಲಿದ್ದು ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love