ರಾಷ್ಟ್ರಪಕ್ಷಿ ನವಿಲಿನ ಸಾವು; ಅಂತ್ಯಸಂಸ್ಕಾರ

Spread the love

ರಾಷ್ಟ್ರಪಕ್ಷಿ ನವಿಲಿನ ಸಾವು; ಅಂತ್ಯಸಂಸ್ಕಾರ

ಉಡುಪಿ: ತೆಂಕನಿಡಿಯೂರು ಗ್ರಾಮ ಪಂಚಾಯತ್ ವ್ಯಾಪಿಗೆ ಬರುವ ಪೊಟ್ಟುಕೆರೆ ಎಂಬಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಗೊಂಡು, ಗಂಡು ನವಿಲೊಂದು ಸಾವಿನಪ್ಪಿದ ಘಟನೆ ಶನಿವಾರ ನಡೆದಿದೆ.

ಈ ಬಗ್ಗೆ ವಿಷಯವನ್ನು ಸ್ಥಳಿಯ ಸಾಮಾಜಿಕ ಕಾರ್ಯಕರ್ತ ಚಂದ್ರಕಾಂತ ಲಕ್ಷೀನಗರ ಅವರು, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತರು, ನವಿಲನ ಕಳೇಬರವನ್ನು ಅಂಬುಲೇನ್ಸ್ ಮೂಲಕ ಸಾಗಿಸಿ ಆದಿಉಡುಪಿಯಲ್ಲಿ ಇರುವ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಕಾನೂನು ಪ್ರಕ್ರೀಯೆ ನಡೆಸಿದ ಅರಣ್ಯಾಧಿಕಾರಿಗಳು ಇಲಾಖೆಯ ವಠಾರದಲ್ಲಿ ಪ್ರಾಣಿ ದಹನಭೂಮಿಯಲ್ಲಿ ರಾಷ್ಟ್ರಪಕ್ಷಿ ನವಿಲಿನ ಕಳೇಬರಕ್ಕೆ ಅಂತಿಮ ಗೌರವಸಲ್ಲಿಸಿ ದಹನ ಮಾಡುವ ಮೂಲಕ ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ಸಂದರ್ಭ ಅರಣ್ಯ ವಿಕ್ಷಕ ದೇವರಾಜ ಪಾಣ, ಪಾರೆಷ್ಟರ್ ಸುರೇಶ್ ಗಾಣಿಗ, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಉಪಸ್ಥಿತರಿದ್ದರು.


Spread the love