ರಾಹೆ 66 ಮುಳ್ಳಿಕಟ್ಟೆ ಬಳಿ ಬೈಕ್ ಟೆಂಪೋ ಟ್ರಾವೆಲರ್ ನಡುವೆ ಅಫಘಾತ – ಇಬ್ಬರ ಸಾವು

Spread the love

ರಾಹೆ 66 ಮುಳ್ಳಿಕಟ್ಟೆ ಬಳಿ ಬೈಕ್ ಟೆಂಪೋ ಟ್ರಾವೆಲರ್ ನಡುವೆ ಅಫಘಾತ – ಇಬ್ಬರ ಸಾವು

ಉಡುಪಿ:  ಜಿಲ್ಲೆಯ ಗಂಗೊಳ್ಳಿ ಸಮೀಪದ ಮುಳ್ಳಿಕಟ್ಟೆ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ರಾತ್ರಿ  ಗಂಟೆ ಸುಮಾರಿಗೆ ಬೈಕ್ ಹಾಗೂ ಟೆಂಪೋ ಟ್ರಾವೆಲರ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

ಮೃತರನ್ನು ಬೈಕ್ ಸವಾರ ಗಂಗೊಳ್ಳಿ ಜಾಮಿಯಾ ಮೊಹಲ್ಲಾ ನಿವಾಸಿ ಮುಹಮ್ಮದ್ ಹುಸೇನ್ ಎಂಬವರ ಮಗ ಶಾದಾಬ್(43) ಹಾಗೂ ಸಹಸವಾರ ಬೈಂದೂರು ಮೂಲದ ಪ್ರಸ್ತುತ ಗಂಗೊಳ್ಳಿ ಬಾಡಿಗೆ ಮನೆ ನಿವಾಸಿ ಅಬ್ದುರ್ರಹೀಮ್(51) ಎಂದು ಗುರುತಿಸಲಾಗಿದೆ.

ಬೈಕ್ ಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ .ಅಪಘಾತದ ರಭಸಕ್ಕೆ ಇಬ್ಬರು ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಇವರಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆನ್ನಲಾಗಿದೆ.

ಶಾದಾಬ್ ಮೀನಿನ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದರೆ ಅಬ್ದುರ್ರಹೀಮ್ ಅಡುಗೆ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love