ರೌಡಿ ರಫೀಕ್ ಕಾಲಿಯ ಕೊಲೆ : ಮೂರು ಆರೋಪಿಗಳ ಬಂಧನ

Spread the love

ರೌಡಿ ರಫೀಕ್ ಕಾಲಿಯ ಕೊಲೆ : ಮೂರು ಆರೋಪಿಗಳ ಬಂಧನ

ಮಂಗಳೂರು: ಕುಖ್ಯಾತ ರೌಡಿ ರಫೀಕ್ ಕಾಲಿಯ ಕೊಲೆ ಪ್ರಕರಣಕ್ಕೆ ಸಂಬಧಿಸಿ ಮೂರು ಪ್ರಮುಖ ಆರೋಪಿಗಳನ್ನು ವಶಪಡಿಸಿಕೊಳ್ಳುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನೂರ್ ಆಲಿ (36), ರಶೀದ್ ಟಿ ಎಸ್ (30), ಹುಸೈನಬ್ಬ (35) ಎಂದು ಗುರುತಿಸಲಾಗಿದೆ.

ಫೆಬ್ರವರಿ 14 ರಂದು ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯ ಕೊಟೇಕಾರು ಪೆಟ್ರೋಲ್ ಬಂಕ್ ಬಳಿ ಕುಖ್ಯಾತ ರೌಡಿ ಕಾಲಿಯಾ ರಫೀಕ್ ಕೊಲೆ ಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳ ಬಗ್ಗೆ ಮಾಹಿತ ಪಡೆದ ಪೋಲಿಸರು ಮಂಗಳೂರು ನಗರದ ಮಂಜನಾಡಿ ನೆತ್ತಿಲಪದವು ಬಳಿ ಆರೋಪಿಗಳನ್ನು ಬಂಧಿಸಿ ಮಾರುತಿ ಎರ್ಟಿಗಾ ಕಾರು ಹಾಗೂ ಕೃತ್ಯಕ್ಕೆ ಬಳಸಿ ತಲವಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆಕಾರ್ಯದಲ್ಲಿ ಸಿಸಿಬಿ ಘಟಕದ ಸುನೀಲ್ ನಾಯ್ಕ್ ತಂಡ ಹಾಗೂ ಉಳ್ಳಾಲ ಪೋಲಿಸ್ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಅವರ ತಂಡ ಭಾಗವಹಿಸಿತ್ತು.


Spread the love