ವಳಚ್ಚಿಲ್ ಬಳಿ ಕಾರು ಹಿಟ್ ಅಂಡ್ ರನ್ ; ಬೈಕ್‌ ಸವಾರನಿಗೆ ಕಾರು ಡಿಕ್ಕಿಯಾಗಿ ಪರಾರಿ, ಯುವಕ ಸ್ಥಳದಲ್ಲೇ ಮೃತ

Spread the love

ವಳಚ್ಚಿಲ್ ಬಳಿ ಕಾರು ಹಿಟ್ ಅಂಡ್ ರನ್ ; ಬೈಕ್‌ ಸವಾರನಿಗೆ ಕಾರು ಡಿಕ್ಕಿಯಾಗಿ ಪರಾರಿ, ಯುವಕ ಸ್ಥಳದಲ್ಲೇ ಮೃತ

ಮಂಗಳೂರು : ನಗರ ಹೊರವಲಯದ ವಳಚ್ಚಿಲ್ ಬಳಿಯ ಹೊಸ ಪೆಟ್ರೋಲ್ ಪಂಪ್ ಎದುರಲ್ಲಿ ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಘಟನೆಯಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ನಗರ ಹೊರವಲಯದ ವಳಚ್ಚಿಲ್ ಬಳಿಯ ಹೊಸ ಪೆಟ್ರೋಲ್ ಪಂಪ್ ಎದುರಲ್ಲಿ ಕಾರೊಂದು ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಘಟನೆಯಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಸೂರಲ್ಪಾಡಿಯ ಹ್ಯಾರಿಸ್ ಎಂದು ಮೃತ ಯುವಕನನ್ನು ಸ್ಥಳೀಯರು ಗುರುತಿಸಿದ್ದಾರೆ. ರಾತ್ರಿ ಹತ್ತು ಗಂಟೆ ವೇಳೆಗೆ ಘಟನೆ ನಡೆದಿದ್ದು ಕಾರಿನ ರಭಸಕ್ಕೆ ಬೈಕ್‌ ಸವಾರ ದೂರಕ್ಕೆ ಎಸೆಯಲ್ಪಟ್ಟಿದ್ದಾನೆ. ಇದರಿಂದ ಯುವಕ ತೀವ್ರ ಗಾಯಗೊಂಡು ರಸ್ತೆಯಲ್ಲೇ ಬಿದ್ದು ಮೃತಪಟ್ಟಿದ್ದಾನೆ. ಕಂಕನಾಡಿ ಟ್ರಾಫಿಕ್‌ ಪೊಲೀಸರು ಅಜಾಗರೂಕತೆಯ ಚಾಲನೆ ಮತ್ತು ಅಪಘಾತ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.


Spread the love
Subscribe
Notify of

0 Comments