Spread the love
ವಿಟ್ಲ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ವಿಟ್ಲ: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಪೆರುವಾಯಿ ಗ್ರಾಮದ ಸತ್ಯ ಯಾನೆ ಸತೀಶ್ (42) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
2012ರ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳ ಪೊಲೀಸ್ ಠಾಣಾ ಅ.ಕ್ರ 40/2012 ಕಲಂ 32,34 ಕೆ.ಇ ಆಕ್ಟ್ ಹಾಗೂ 87/2012 ಕಲಂ 32,34 ಕೆ.ಇ ಆಕ್ಟ್ ಪ್ರಕರಣದಲ್ಲಿ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿರುವ ಪೆರುವಾಯಿ ಗ್ರಾಮದ ಸತ್ಯ ಯಾನೆ ಸತೀಶ್ (ಎಂಬಾತನನ್ನು ಜು. 23ರಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Spread the love