ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

Spread the love

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ – ಆರೋಪಿಯ ಬಂಧನ

ಮಂಗಳೂರು: ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೊರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಹಾರಾಷ್ಟ್ರ ಮುಂಬೈ ನಿವಾಸಿ ತಯ್ಯಬ್ (19) ಎಂದು ಗುರುತಿಸಲಾಗಿದೆ.

ಯುವತಿಯು ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದು ಆಕೆಗೆ ಸಾಮಾಜಿಕ ಜಾಲತಾಣದ ಮೂಲಕ ಮಹಾರಾಷ್ಟ್ರ ಮುಂಬೈ ನಿವಾಸಿಯಾದ ಆರೋಪಿ ತಯ್ಯಬ್ (19 ವರ್ಷ) ಎಂಬಾತನ ಪರಿಚಯವಾಗಿರುತ್ತದೆ.

ಇಬ್ಬರೂ ಕೂಡ ಸುಮಾರು ಒಂದುವರೆ ವರ್ಷಗಳಿಂದ ಸ್ನೇಹಿತರಾಗಿದ್ದು, ದಿನಾಂಕ: 2/6/2019 ರಂದು ಸಂತ್ರಸ್ಥ ಯುವತಿಯನ್ನು ಭೇಟಿಯಾಗಲು ಆರೋಪಿ ತಯ್ಯಬ್ ನು ಪುತ್ತೂರಿಗೆ ಬಂದು ಲಾಡ್ಜ್ ನಲ್ಲಿ ರೂಂ ಮಾಡಿ ಲಾಡ್ಜ್ ನಲ್ಲಿ ಸಂತ್ರಸ್ಥ ಯುವತಿಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ಕಿರುಕುಳ ನೀಡಿರುತ್ತಾನೆ ಹಾಗೂ ದಿನಾಂಕ 20/10/2019 ರಂದು ಎರಡನೇ ಬಾರಿ ಸಂತ್ರಸ್ಥ ಯುವತಿಯನ್ನು ಪುತ್ತೂರಿನ ಸ್ಥಳೀಯ ಲಾಡ್ಜ್ ಗೆ ಬರಹೇಳಿದ್ದು, ಭೇಟಿಯಾಗಲು ತೆರಳಿದ ಸಂತ್ರಸ್ಥ ಯುವತಿಗೆ ಲಾಡ್ಜ್ ನಲ್ಲಿ ಇಚ್ಚೆಗೆ ವಿರುದ್ದ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ದು ಜೀವ ಬೆದರಿಕೆ ಹಾಕಿರುವುದಾಗಿದೆ

ಈ ಕುರಿತು ಅಕ್ಟೋಬರ್ 20 ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆ ಯಲ್ಲಿ ಸಂತ್ರಸ್ಥ ಯುವತಿ ನೀಡಿದ ದೂರಿನಂತೆ ಪೋಸ್ಕೊ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love