ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್

Spread the love

ವಿಷನ್ 2025- ಸಿದ್ದತೆಗೆ ವಿಡಿಯೋ ಕಾನ್ಫರೆನ್ಸ್
ಉಡುಪಿ : ಮುಂದಿನ ಏಳು ವರ್ಷಗಳಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ತಂತ್ರವನ್ನು ಒದಗಿಸುವ ಉದ್ದೇಶ ಹೊಂದಿರುವ ವಿಷನ್ -2025 ಜಿಲ್ಲಾ ಮಟ್ಟದ ಕಾರ್ಯಕ್ರಮ ಅಕ್ಟೋಬರ್ 4ರಂದು ಬೆಳಗ್ಗೆ ಕೆ ಎಂ ಸಿಯ ಡಾ ಟಿ ಎಮ್ ಎ ಪೈ ಹಾಲ್ ನಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಜಿಲ್ಲಾಡಳಿತ ಈ ಸಂಬಂಧ ಹಲವು ಪೂರ್ವಭಾವಿ ಸಭೆಗಳನ್ನು ನಡೆಸಿದೆ.
ಕಾರ್ಯಕ್ರಮ ಆಯೋಜನೆ ಸಂಬಂಧ ವಿಷನ್ 2025 ಸಿಇಒ ರೇಣುಕಾ ಚಿದಂಬರಮ್ ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವೆಣ್ಣನ್ ಅವರಿದ್ದರು.
ಅಂದು ಪ್ರಮುಖ ಐದು ವಿಷಯಗಳ ಕುರಿತು 20 ಸದಸ್ಯರನ್ನೊಳಗೊಂಡ ಐದು ಪ್ರತ್ಯೇಕ ಗುಂಪುಗಳು ಚರ್ಚೆ ನಡೆಸಲಿದ್ದು, ಪ್ರಮುಖ ಕಲಿಕೆಗಳನ್ನು ಅಂತಿಮ ಹಂತದಲ್ಲಿ ಕ್ರೂಢೀಕರಿಸಲಾಗುವುದು.
ಈ ಸಂಬಂಧ ಜಿಲ್ಲಾಡಳಿತ ಎಲ್ಲ ಸಿದ್ದತೆಗಳನ್ನು ಪೂರ್ಣಗೊಳಿಸಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಮಾಹಿತಿ ನೀಡಿದರು.


Spread the love