ವೇಶ್ಯಾವಾಟಿಕೆ ಕೇಂದ್ರಕ್ಕೆ ದಾಳಿ ; ಹತ್ತು ಮಂದಿಯ ಬಂಧನ

Spread the love

ವೇಶ್ಯಾವಾಟಿಕೆ ಕೇಂದ್ರಕ್ಕೆ ದಾಳಿ ; ಹತ್ತು ಮಂದಿಯ ಬಂಧನ

ಉಡುಪಿ: ಬಡಗಬೆಟ್ಟು ಗ್ರಾಮದ ರಾಜೀವ ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ಸಂಬಂಧ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಒರ್ವ ಮಹಿಳೆ ಸೇರಿದಂತೆ ಅಲ್ಬಾಡಿಯ ದೀಪಕ್ (30), ದಿನೇಶ (30), ಐರೋಡಿ ಗ್ರಾಮದ ವಿನಯ್ (28), ಚಿಕ್ಕಮಗಳೂರಿನ ಸತೀಶ (30), ಹೆರ್ಗದ ಪುನೀತ್ (29), ಚಿಟ್ಪಾಡಿಯ ಸಚಿನ್ (32), ತಮಿಳುನಾಡಿನ ಅರುಣ್ (25), ಇಂದ್ರಾಳಿಯ ಕಾರ್ತಿಕ್ (37), ಹಾಗೂ ವೇಶ್ಯಾವಾಟಿಕೆ ನಡೆಸುತ್ತಿದ್ದ ಬ್ರಹ್ಮಾವರದ ಆರೂರಿನ ಮಹೇಶ್ ಭಟ್ (24) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ್ ಪಿ ನೇತೃತ್ವದಲ್ಲಿ ತಂಡ ಧಾಳಿ ನಡೆಸಿದ್ದು, ಬಂಧಿತರಿಂದ ರೂ 62250 ನಗದು ಹಾಗೂ ಮೊಬೈಲ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ


Spread the love