Spread the love
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ – ಇಬ್ಬರ ವಿರುದ್ದ ಪ್ರಕರಣ ದಾಖಲು
ಮಂಗಳೂರು: ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ 02 ಪ್ರಕರಣಗಳಲ್ಲಿ ಒಟ್ಟು 02 ಜನರನ್ನು ಪತ್ತೆ ಹಚ್ಚಿ ತನಿಖೆ ನಡೆಸಲಾಗಿದೆ.
- ಉರ್ವಾ ಪೊಲೀಸ್ ಠಾಣೆ: ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜ್ಜೆಯಲ್ಲಿ ತಲವಾರು ದಾಳಿಯಿಂದ ಮೃತಪಟ್ಟ ಸುಹಾಸ್ ಶೆಟ್ಟಿ ಪೋಟೊ ಹಾಕಿ VHP ಭಜರಂಗದಳ ಅಶೋಕನಗರ ಮತ್ತು ಶಂಖನಾದ ಎಂಬ ಎರಡು ಇನ್ ಸ್ಟಾಗ್ರಾಂ ಪ್ರೊಪೈಲ್ ಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಜನರಲ್ಲಿ ಸಮಾಜದ ವಿವಿಧ ಧರ್ಮ ಹಾಗೂ ವರ್ಗಗಳ ಜನರಲ್ಲಿ ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯವೆಸಗುವಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಸ್ಟೋರಿಯನ್ನು ಹಾಕಿದ್ದ ಮನೀಷ್ ಕುಮಾರ್, ಅಶೋಕ್ ನಗರ, ಮಂಗಳೂರು ಎಂಬುವವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದ್ದು ತನಿಖೆ ಮುಂದುವರೆಸಲಾಗಿದೆ.
- ಕಾವೂರು ಪೊಲೀಸ್ ಠಾಣೆ: ಕುಡುಪು ದೇವಸ್ಥಾನದ ಬಳಿ ನಡೆದ ಹತ್ಯೆಯಲ್ಲಿ ಶಾಸಕರ ಆಪ್ತರ ನೇತೃತ್ವದಲ್ಲಿ ನಡೆಸಲಾಗಿದ್ದು, ಅದನ್ನು ಮುಚ್ಚಿಹಾಕಲು ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಹತ್ಯೆಗೈಯಲಾಯಿತೇ..? ಎಂದು ಜನಗಳ ಮಧ್ಯೆ ಗೊಂದಲ ಸೃಷ್ಟಿ ಮಾಡಿ ಸಾಮಾನ್ಯ ಜನರನ್ನು ದಿಕ್ಕು ತಪ್ಪಿಸುವ ರೀತಿ ಬರಹವನ್ನು ಸೃಷ್ಟಿ ಮಾಡಿ ಹಾಗೂ ಸುಹಾಸ್ ಶೆಟ್ಟಿ ಹತ್ಯೆ, ಗುಂಪು ಹತ್ಯೆಯನ್ನು ಮರೆಮಾಚಿ ಬಿಜೆಪಿ ಪಕ್ಷಕ್ಕೆ ಮೈಲೇಜ್ ನೀಡುವ ಸಲುವಾಗಿ ಸುಹಾಸ್ ಹತ್ಯೆ ಮಾಡಲಾಗಿದೆಯೇ..? ಎಂಬ ಸುಳ್ಳು ಸುದ್ದಿಯನ್ನು ವಾಟ್ಸ್ ಆಪ್ ಗ್ರೂಪ್ ನಲ್ಲಿ ಹರಿಬಿಟ್ಟಿದ್ದ ಹಸನ್ ಬಾವ, ಕಿನ್ನಿಪದವು ಮಂಗಳೂರು ಎಂಬುವವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Spread the love