ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಉತ್ತರ ಠಾಣೆಯ ಪೋಲಿಸರು ಕಾಂಚನ ವೈನ್ ಶಾಪ್ ಬಳಿ ಬಂಧಿಸಿದ್ದಾರೆ.

ಬಂಧಿತನನ್ನು ಕುಡುಪು ನೀರು ಮಾರ್ಗ ನಿವಾಸಿ ಹರೀಶ್ (27) ಎಂದು ಗುರುತಿಸಲಾಗಿದೆ.

ಜುಲೈ 31 ರಂದು ಮಂಗಳೂರು ಉತ್ತರ ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರು ಮತ್ತು ಸಿಬಂಧಿಗಳು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ವೇಳೆ ಮಂಗಳೂರು ಪೆಲಿಕ್ಸ್ ಪೈ ಬಜಾರಿನ ಬಳಿ ಇರುವ ಕಾಂಚನ ವೈನ್ ಶಾಪ್ ಬಳಿಯಲ್ಲಿ ಸಾರ್ವಜನಿಕರಿಗೆ ಹರೀಶ್ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ.

ಬಂಧಿತನಿಂದ ರೂ 20000 ಮೌಲ್ಯದ 1ಕೆಜಿ 70ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಉತ್ತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ನಂತರ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.


Spread the love