ಸಿಬಂದಿಗೆ ಕೊರೋನಾ; ಎಸ್ಪಿ ಕಚೇರಿ ಬಂದ್ ಮಾಡಿಲ್ಲ – ಸ್ಯಾನಿಟೈಸ್ ಮಾಡಲಾಗಿದೆ – ಎಸ್ಪಿ ವಿಷ್ಣುವರ್ಧನ್

Spread the love

ಸಿಬಂದಿಗೆ ಕೊರೋನಾ; ಎಸ್ಪಿ ಕಚೇರಿ ಬಂದ್ ಮಾಡಿಲ್ಲ – ಸ್ಯಾನಿಟೈಸ್ ಮಾಡಲಾಗಿದೆ – ಎಸ್ಪಿ ವಿಷ್ಣುವರ್ಧನ್

ಉಡುಪಿ: ಸಿಬಂದಿಗೆ ಕೊರೋನಾ ಪಾಸಿಟಿವ್ ಕಂಡು ಬಂದ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ವಿನಃ ಸೀಲ್ ಡೌನ್ ಮಾಡಿಲ್ಲ ಎಂದು ಎಸ್ಪಿ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿರುವ ಸಿಬಂದಿಯೋರ್ವರಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದ್ದು, ಎಸ್ಪಿ ಕಚೇರಿಯನ್ನು ಕೋವಿಡ್ ನಿಯಮಾವಳಿಗಳ ಪ್ರಕಾರ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಗತ್ಯ- ಕನಿಷ್ಠ ಸಿಬ್ಬಂದಿಯೊಂದಿಗೆ ಎಸ್ಪಿ ಕಚೇರಿಯ ಕಾರ್ಯಗಳ ನಿರ್ವಹಣೆ ನಡೆಯುತ್ತಿದೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.


Spread the love