ಸೀಝ್ ಮಾಡಿದ ಆಟೋ ಟೋಯಿಂಗ್ ವೇಳೆ ಅಪಘಾತ- ಪೀಣ್ಯ ಠಾಣೆ ಪಿಸಿ ನಾಗೇಶ್ ಗಂಭೀರ

Spread the love

ಸೀಝ್ ಮಾಡಿದ ಆಟೋ ಟೋಯಿಂಗ್ ವೇಳೆ ಅಪಘಾತ- ಪೀಣ್ಯ ಠಾಣೆ ಪಿಸಿ ನಾಗೇಶ್ ಗಂಭೀರ

ಬೆಂಗಳೂರು: ಲಾಕ್ ಡೌನ್ ವೇಳೆ ಅನಾವಶ್ಯಕವಾಗಿ ತಿರುಗಿತ್ತಿದ್ದ ವಾಹನಗಳ ತಪಾಸಣೆ ನಡೆಯುತ್ತಿದ್ದು ಸೀಝ್ ಮಾಡಿದ ಆಟೋ ಟೋಯಿಂಗ್ ವೇಳೆ ಅಪಘಾತ ಸಂಭವಿಸಿ ಪೀಣ್ಯ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದೆ.

ಗಾಯಗೊಂಡ ಪೊಲೀಸ್ ಕಾನ್ಸ್ ಟೇಬಲ್ ಅವರನ್ನು ಪೀಣ್ಯ ಠಾಣೆಯ ಪಿಸಿ ಪಿಸಿ ನಾಗೇಶ್ ಎಂದು ಗುರುತಿಸಲಾಗಿದೆ.

ಭಾನುವಾರ ಲಾಕ್ ಡೌನ್ ಸಮಯದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ಆಟೋವನ್ನು ತಡೆದು ಪಿಸಿ ನಾಗೇಶ್ ಅವರು ಸೀಝ್ ಮಾಡಿದ್ದು ಅದನ್ನು ಸ್ಟೇಷನ್ ಬಳಿ ಚಲಾಯಿಸಿಕೊಂಡು ವೇಳೆ ಅಪಘಾತ ವಾಗಿ ಪಿಸಿ ನಾಗೇಶ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ನಾಗೇಶ್ಗೆ ಚಿಕಿತ್ಸೆ ನಡೆಯುತ್ತಿದೆ.

 


Spread the love