ಸುರತ್ಕಲ್; ಅಪರಿಚಿತ ಶವ ಪತ್ತೆ

A new interactive exhibit just getting ready to open on Monday at the Empire State Building will excite crowds.
Spread the love

ಸುರತ್ಕಲ್; ಅಪರಿಚಿತ ಶವ ಪತ್ತೆ

ಮಂಗಳೂರು : ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೇಳಾರು ಖಂಡಿಗೆ ನಂದಿನಿ ಹೊಳೆಯ ಮಧ್ಯದಲ್ಲಿ ಅಪರಿಚಿತ ಗಂಡಸಿನ ಮೃತದೇಹವು ಜುಲೈ 15 ರಂದು ಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಚಹರೆ ಇಂತಿವೆ :- ವಯಸ್ಸು: 45-50 ವರ್ಷ, ದುಂಡು ಮುಖ, ತಿಳಿ ಗೋಧಿ ಮೈ ಬಣ್ಣ, ಕಪ್ಪು ನೀಲಿ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಿಳಿ ಮಿಶ್ರಿತ ತಲೆ ಕೂದಲು ಹಾಗೂ ಕುರುಚಲು ಗಡ್ಡ. ಮೃತ ದೇಹವು ಕೊಳೆತು ಹೋಗಿದ್ದು ಸುಮಾರು 4-5 ದಿನದ ಹಿಂದೆ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು.

ಹೆಚ್ಚಿನ ಮಾಹಿತಿಗಾಗಿ ಸುರತ್ಕಲ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ:- 0824 -2220540, 9480805360, 9480802345 ಅಥವಾ ನಗರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ:- 0824-2220800 ಸಂಪರ್ಕಿಸಲು ಸುರತ್ಕಲ್ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love