ಸುರತ್ಕಲ್ ಬಳಿ ಅಕ್ರಮ ಗೋಸಾಗಟದ ವಾಹನ ವಶ

Spread the love

ಸುರತ್ಕಲ್ ಬಳಿ ಅಕ್ರಮ ಗೋಸಾಗಟದ ವಾಹನ ವಶ

ಮಂಗಳೂರು: ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ಗೋವುಗಳನ್ನು ಸುರತ್ಕಲ್ ಪೋಲಿಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಮುಂಜಾನೆ ಸುರತ್ಕಲ್ ಟೋಲ್ ಗೇಟ್ನ ಬಳಿಯ ಮಲ್ಲಮಾರ್ ಬೀಚ್ನ ಹತ್ತಿರ ಅಕ್ರಮವಾಗಿ ಪಿಕಪ್ ವಾಹನದಲ್ಲಿ 16 ದೋಡ್ಡ ಹಸು ಹಾಗೂ 6 ಸಣ್ಣ ಕರುಗಳನ್ನು ಒಟ್ಟು 22 ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದಾಗ ಪೋಲೀಸರು ವಶಪಡಿಸಿ ಕೊಂಡಿದ್ದಾರೆ. ಈ ವೇಳೆ 1 ಹಸು ಸಾವನ್ನಪ್ಪಿದ್ದು ಮತ್ತು 3 ಚಿಂತಾಜನಕ ಸ್ಥಿತಿಯಲ್ಲಿವೆ.

ಸುರತ್ಕಲ್ ಪೋಲೀಸರೊಂದಿಗೆ ಹಿಂದೂ ಜಾಗರಣ ವೇದಿಕೆ ಸುರತ್ಕಲ್ ನಗರದ ಕಾಯ೯ಕತ೯ರು ಗೋವುಗಳನ್ನು ಆರೈಕೆ ಮಾಡಿದರು


Spread the love