ಸೆ 13 : ಉಡುಪಿ ಜಿಲ್ಲೆಯಲ್ಲಿ 126 ಮಂದಿಗೆ ಕೊರೋನಾ ಪಾಸಿಟಿವ್ ದೃಢ, ನೆಗೆಟಿವ್ 2039

Spread the love

ಸೆ 13 : ಉಡುಪಿ ಜಿಲ್ಲೆಯಲ್ಲಿ 126 ಮಂದಿಗೆ ಕೊರೋನಾ ಪಾಸಿಟಿವ್ ದೃಢ, ನೆಗೆಟಿವ್ 2039

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾನುವಾರ ಒಟ್ಟು 126 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 14038 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 53, ಕುಂದಾಪುರದ 47, ಕಾರ್ಕಳದ 20 ಹಾಗೂ ಇತರೆ ಜಿಲ್ಲೆಗಳ 6 ರೋಗಿಗಳು ಇದ್ದಾರೆ. 69 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 57 ಮಂದಿಗೆ ಲಕ್ಷಣಗಳು ಇಲ್ಲ.

ಪ್ರಾಥಮಿಕ ಸಂಪರ್ಕದ 30, ಐಎಲ್ಐ ಲಕ್ಷಣಗಳಿರುವ 46, ‘ಸಾರಿ’ ಲಕ್ಷಣಗಳಿರುವ 11ಮಂದಿಗೆ, ಹಾಗೂ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದ ಬಂದ 6 ಮಂದಿಗೆ ಸೋಂಕು ತಗುಲಿದ್ದು, 33 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 2019 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಭಾನುವಾರ 2039 ವರದಿಗಳು ನೆಗೆಟಿವ್ ಬಂದಿದ್ದು, 126 ಪಾಸಿಟಿವ್ ಬಂದಿವೆ. 305 ವರದಿಗಳು ಬರುವುದು ಬಾಕಿ ಇದೆ.

ಭಾನುವಾರ ಒಟ್ಟು 154 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಇದುವರೆಗೂ 12176 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 1732 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 130 ಮಂದಿ ಸಾವನಪ್ಪಿದ್ದಾರೆ.


Spread the love