ಸೋದೆ ಮಠದ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

Spread the love

ಸೋದೆ ಮಠದ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಉಡುಪಿ: ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೊಳಗಾದ ಕುಟುಂಬಗಳಿಗೆ ಉಡುಪಿಯ ದೊಡ್ಡಣಗುಡ್ಡೆ, ಮನ್ನೊಳಿಗುಜ್ಜಿ, ಕಕ್ಕುಂಜೆ, ನಿಟ್ಟೂರು ಹನುಮಂತನಗರ ವಾರ್ಡ್ ನ ಜನರಿಗೆ ಸೋದೆ ವಾದಿರಾಜ ಮಠದಿಂದ ಅವಶ್ಯಕ ಆಹಾರ ಸಾಮಾಗ್ರಿಗಳ ಪೊಟ್ಟಣವನ್ನು ವಿತರಿಸಲಾಯಿತು.

ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದಿನಸಿ ಸಾಮಗ್ರಿಗಳ ಕಿಟ್ ಅನ್ನು ಆಯಾ ವಾರ್ಡ್ ನ ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ, ಗಿರಿಧರ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಸಂತೋಷ್ ಇವರ ಮೂಲಕ ನೀಡಿದರು.

ದಿವಾನರಾದ ಪಾಡಿಗಾರು ಶ್ರೀನಿವಾಸ ತಂತ್ರಿಗಳು ಉಪಸ್ಥಿತರಿದ್ದರು.


Spread the love