ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

Spread the love

ಹಳೆಕೋಟೆ: ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

ಉಳ್ಳಾಲ: ನಗರ ಸಭಾ ವ್ಯಾಪ್ತಿಯ ಹಳೆಕೋಟೆಯ ಜಸ್ವಿಲ್ ಮಂಝಿಲ್ ಮನೆಯಲ್ಲಿ ನಿನ್ನೆ ರಾತ್ರಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.

ಮೂರು ಜನರ ಕಳ್ಳರ ತಂಡ ಸುಮಾರು 17 ಪವನ್ ಚಿನ್ನ ಮತ್ತು 3.70 ಲಕ್ಷ ರೂ. ನಗದು ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ. ತಂಡದಲ್ಲಿದ್ದ ಓರ್ವ ನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ತಿಳಿದುಬಂದಿದ್ದು, ಆತ ತಮಿಳುನಾಡು ಮೂಲದವನೆಂದು ಅಂದಾಜಿಸಲಾಗಿದೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love