ಹಿಂದೂ ಯುವತಿಗೆ ವಾಮಾಚಾರ ಮಾಡಲು ಯತ್ನಿಸಿದ ಕ್ರೈಸ್ತ ಸಂಘಟನೆ ಸದಸ್ಯನ ಬಂಧನ

Spread the love

ಹಿಂದೂ ಯುವತಿಗೆ ವಾಮಾಚಾರ ಮಾಡಲು ಯತ್ನಿಸಿದ ಕ್ರೈಸ್ತ ಸಂಘಟನೆ ಸದಸ್ಯನ ಬಂಧನ

ಹಾಸನ: ಹಾಸನದಲ್ಲಿ ಹಿಂದೂ ಯುವತಿಯೋರ್ವರಿಗೆ ವಾಮಾಚಾರಕ್ಕೆ ಯತ್ನಿಸಿದ ಕ್ರೈಸ್ತ ಸಂಘಟನೆಯ ಸದಸ್ಯರೋರ್ವರನ್ನು ವಾಮಂಜೂರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪೋಲಿಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಪುತ್ತೂರಿನ ಅನಿಲ್ (57) ಎಂದು ಗುರುತಿಸಲಾಗಿದೆ.

ಪುತ್ತೂರಿನ ಯುವತಿಯೋರ್ವಳನ್ನು ಹಾಸನಕ್ಕೆ ಕರೆದೊಯ್ದು, ವಾಮಾಚಾರ ಮಾಡಲು ಯತ್ನಿಸುತ್ತಿದ್ದ ವೇಳೆ ಅದೇ ದಾರಿಯಲ್ಲಿ ಪ್ರಯಾಣಿಸಿತ್ತಿದ್ದ ವಾಮಂಜೂರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಗಮನಿಸಿ ಆರೋಪಿಯನ್ನು ಹಿಡಿದು ಹಾಸನ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಹಾಸನ ಪೆನ್ ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love