ಹುಣಸೂರು ಬಳಿ ಟೆಂಪೋ-ಲಾರಿ ಅಪಘಾತ : ಉಳ್ಳಾಲದ ಮೂವರು ಮೃತ್ಯು

Spread the love

ಹುಣಸೂರು ಬಳಿ ಟೆಂಪೋ-ಲಾರಿ ಅಪಘಾತ : ಉಳ್ಳಾಲದ ಮೂವರು ಮೃತ್ಯು

ಉಳ್ಳಾಲ : ಮೈಸೂರಿಗೆ ಹೊರಟಿದ್ದ ಟೆಂಪೋ ಟ್ರಾವಲರ್‍ಗೆ ಲಾರಿಯೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಮೂವರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಉಳ್ಳಾಲ ಮಾಸ್ತಿಕಟ್ಟೆಯ ಹಮೀದ್ , ಹಮೀದ್ ರ ಪುತ್ರ ಆಕಿಫ್ , ಇಕ್ಬಾಲ್ , ಎಂದು ಗುರುತಿಸಲಾಗಿದೆ.ಹಮೀದ್ ಕುಟುಂಬ ಸಮೇತ 17 ಮಂದಿ ಕಳೆದ ರಾತ್ರಿ 11 ಘಂಟೆಗೆ ಮನೆಯಿಂದ ಟೆಂಪೋ ಟ್ರಾವೆಲರ್ ನಲ್ಲಿ ಮೈಸೂರು ಹಾಗೂ ಊಟಿಗೆಂದು ತೆರಳಿದ್ದರು. ಇಂದು ಬೆಳಿಗ್ಗೆ ಇವರು ಸಂಚರಿಸುತ್ತಿದ್ದ ಟ್ರಾವೆಲರ್ ಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದಿಂದ ಟೆಂಪೋ ಟ್ರಾವಲರ್ ನ ಮುಂಭಾಗ ಸಂಪೂರ್ಣ ನಜ್ಜುಗುಜಜಾಗಿದ್ದು ಉಳಿದ 14 ಮಂದಿ ಗಾಯಗೊಂಡಿದ್ದು ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love