17ನೇ ರಾಜ್ಯ ಮಟ್ಟದ ಜೂನಿಯರ್ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ ಗೆ ಚಾಲನೆ

Spread the love

17ನೇ ರಾಜ್ಯ ಮಟ್ಟದ ಜೂನಿಯರ್ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ ಗೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಹಾಗೂ ಕರ್ನಾಟಕ ಹ್ಯಾಂಡ್ ಅಸೋಸಿಯೇಷನ್ ವತಿಯಿಂದ 17ನೇ ರಾಜ್ಯ ಮಟ್ಟದ ಜೂನಿಯರ್ ಹ್ಯಾಂಡ್ಬಾಲ್ ಚಾಂಪಿಯನ್ ಶಿಪ್ ಗೆ ನಗರದ ಮಹಾತ್ಮಾ ಗಾಂಧಿ ಬಯಲು ಕ್ರೀಡಾಂಗಣ ಬೀಡಿನಗುಡ್ಡೆಯಲ್ಲಿ ಚಾಲನೆ ದೊರೆಯಿತು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಜನಾರ್ದನ ತೋನ್ಸೆ ಚಾಂಪಿಯನ್ ಶಿಪ್ ಗೆ ಚಾಲನೆ ನೀಡಿ ವಾಲಿಬಾಲ್ ,ತ್ರೊಬಾಲ್ ನಲ್ಲಿ ನಮ್ಮ ಜಿಲ್ಲೆಯ ಗ್ರಾಮೀಣ ಹಲವಾರು ಕ್ರೀಡಾಪಟುಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅದರೆ ರೀತಿಯಲ್ಲಿ ಹ್ಯಾಂಡ್ ಬಾಲ್ ಕ್ರೀಡೆಯೂ ಗ್ರಾಮೀಣ ಭಾಗಕ್ಕೆ ಕೊಂಡಯ್ಯಬೇಕಾಗಿದೆ. ಅದಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಈ ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಳು ಪ್ರೋತ್ಸಾಹ ನೀಡಬೇಕೆಂದು ಎಂದರು

ಮುಖ್ಯ ಅತಿಥಿಗಳಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗಡೆ , ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಧುಕರ್, ರೋಷನ್ ಕುಮಾರ್, ಹ್ಯಾಂಡ್ಬಾಲ್ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಎಂಕೆ ನಾಗೇಂದ್ರ, ವಲಯ ದೈಹಿಕ ಶಿಕ್ಷಣಾಧಿಕಾರಿ ಶೇಖರ ಪಾಟೀಲ್ ,ಕೋಶಧಿಕಾರಿ ನಿರುಪಮಾ ಪ್ರಸಾದ್ ಶೆಟ್ಟಿ ,ರಾಘವೇಂದ್ರ , ಸಾಯಿರಾಧ ಡೆವಲಪರ್ಸ್ನ ಮನೋಹರ್ ಶೆಟ್ಟಿ ,ಕಿಶನ್ ಹೆಗಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಹ್ಯಾಂಡ್ ಬಾಲ್ ಅಸೊಶೀಯೇಶನ್ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿ ಶ್ರೀಕಾಂತ್ ಸಾಮಂತ್ ಕಾರ್ಯಕ್ರಮ ನಿರೂಪಿಸಿ, ಸುದರ್ಶನ್ ನಾಯಕ್ ಧನ್ಯವಾದವಿತ್ತರು .

ರಾಜ್ಯದ ವಿವಿಧ ಜಿಲ್ಲೆಯ 21ಹುಡುಗರ 12ಹುಡುಗಿಯರ ತಂಡ ಬಂದಿದ್ದು 25 ರಾಜ್ಯಮಟ್ಟದ ತೀರ್ಪುಗಾರರು ಭಾಗವಹಿಸಿದ್ದಾರೆ .


Spread the love