Spread the love
ಕೆಲಸಕ್ಕೆಂದು ಬೆಂಗಳೂರಿಗೆ ತೆರಳಿದ್ದ 19 ವರ್ಷದ ಯುವಕ ಅಜೇಯ್ ಡಿ’ಸೋಜಾ ನಾಪತ್ತೆ
ಮಂಗಳೂರು: ಉಳ್ಳಾಲ ತಾಲೂಕು ಪೆರ್ಮನೂರು ಗ್ರಾಮದ ಹೊಸಪಡಪು ಕಲ್ಲಾಪು ಪಟ್ಲ ನಿವಾಸಿ ಅಜೇಯ್ ಡಿ’ಸೋಜಾ (19) ಎಂಬ ಯುವಕ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದು, ಬಳಿಕ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಅಜೇಯ್ ಡಿ’ಸೋಜಾ ಅವರು 5 ಅಡಿ 4 ಇಂಚು ಎತ್ತರ, ದುಂಡು ಮುಖ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹಾಗೂ ಗುಂಗುರು ಕೂದಲು ಹೊಂದಿದ್ದಾರೆ. ಅವರು ಕನ್ನಡ, ಹಿಂದಿ, ತುಳು ಮತ್ತು ಕೊಂಕಣಿ ಭಾಷೆಗಳನ್ನು ಮಾತನಾಡುತ್ತಾರೆ.
ಯುವಕನ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಉಳ್ಳಾಲ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Spread the love













