ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ಸರ: ವಾರಸುದಾರರಿಗೆ ಮರಳಿಸಿದ ಚಾಲಕ

Spread the love

 ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ಸರ: ವಾರಸುದಾರರಿಗೆ ಮರಳಿಸಿದ ಚಾಲಕ

ಮಂಗಳೂರು:  ಸುಲ್ತಾನ್ ಗೋಲ್ಡ್ ಶಾಪ್‌ನಲ್ಲಿ 48 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಸರವನ್ನು ಖರೀದಿಸಿದ ಅಫ್ಜಿಲಾ ಎಂಬುವವರು, ಬಳಿಕ ರಿಕ್ಷಾದಲ್ಲಿ ಪ್ರಯಾಣಿಸುವ ವೇಳೆ ಚಿನ್ನದ ಸರವಿದ್ದ ಬ್ಯಾಗ್‌ನ್ನು ರಿಕ್ಷಾದಲ್ಲೇ ಮರೆತು ಬಿಟ್ಟುಹೋದ ಘಟನೆ ನಡೆದಿದೆ.

ಅಫ್ಜಿಲಾ ಅವರು ಬ್ಯಾಗ್‌ನ್ನು ರಿಕ್ಷಾದಲ್ಲೇ ಬಿಟ್ಟು ಹೋಗಿರುವುದನ್ನು ಗಮನಿಸಿದ ರಿಕ್ಷಾ ಚಾಲಕ ಬಸವರಾಜ್ ಅವರು ಬ್ಯಾಗ್‌ನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನದ ನೆಕ್ಲೇಸ್ ಪತ್ತೆಯಾಗಿದೆ. ಬಳಿಕ ಯಾವುದೇ ದುರುದ್ದೇಶವಿಲ್ಲದೆ ಪ್ರಾಮಾಣಿಕತೆ ಮೆರೆದ ಬಸವರಾಜ್ ಅವರು 48 ಗ್ರಾಂ ಚಿನ್ನದ ನೆಕ್ಲೇಸ್ ಸರವಿದ್ದ ಬ್ಯಾಗ್‌ನ್ನು ಅದರ ವಾರಸುದಾರರಾದ ಅಫ್ಜಿಲಾ ಅವರಿಗೆ ಮರಳಿಸಿದ್ದಾರೆ.

ಚಿನ್ನದ ಸರವನ್ನು ಸುರಕ್ಷಿತವಾಗಿ ವಾಪಸ್ ನೀಡಿದ ರಿಕ್ಷಾ ಚಾಲಕ ಬಸವರಾಜ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.


Spread the love
Subscribe
Notify of

0 Comments