5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ!

5 ಲಕ್ಷಕ್ಕಾಗಿ ಗಂಡನನ್ನು ಮತ್ತೋರ್ವ ಮಹಿಳೆಗೆ ಮಾರಿದ ಪತ್ನಿ!

ಮಂಡ್ಯ (Kannadaprabha): ಮತ್ತೋರ್ವ ಹೆಣ್ಣಿನೊಂದಿಗೆ ಸಂಬಂಧ ಹೊಂದಿದ್ದ ಪತಿಗೆ ಹಿಗ್ಗಾ-ಮುಗ್ಗಾ ಥಳಿಸಿರುವ ಘಟನೆಯನ್ನು ಅಲ್ಲಲ್ಲಿ ನೀವು ಕೇಳಿಯೇ ಇರುತ್ತೀರಿ. ಆದರೆ ಇಲ್ಲೋರ್ವ ಮಹಿಳೆ, ಅಕ್ರಮ ಸಂಬಧ ಹೊಂದಿದ್ದ ಪತಿಯನ್ನು ಮಾರಾಟ ಮಾಡಿದ್ದಾಳೆ!

ಈ ವಿಲಕ್ಷಣ ಘಟನೆ ಮಂಡ್ಯದಲ್ಲಿ ನಡೆದಿದ್ದು, ಪ್ರತಿ ಘಟನೆಯಲ್ಲೂ ನಡೆಯುವಂತೆಯೇ ಇಲ್ಲಿಯೂ ಪ್ರಾರಂಭದಲ್ಲಿ ಇಬ್ಬರು ಮಹಿಳೆಯರ ನಡುವೆ ವಾಗ್ವಾದವಾಗಿ ಮಾರಾಮಾರಿ ನಡೆದಿದೆ. ಇಷ್ಟೆಲ್ಲಾ ಆದ ಬಳಿಕ ವಿಷಯವನ್ನು ಪಂಚಾಯ್ತಿಯಲ್ಲಿ ಮೆಟ್ಟಿಲೇರಿದೆ.

ನನ್ನೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ನನ್ನ ಬಳಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದಾನೆಂದು ಮಹಿಳೆ ಆರೋಪಿಸಿದ್ದಾಳೆ. ಈ ಹಣವನ್ನು ವಾಪಸ್ ನೀಡಿ ನಿನ್ನ ಗಂಡನನ್ನು ವಾಪಸ್ ಕರೆದುಕೊಂಡು ಹೋಗು ಎಂದು ವ್ಯಕ್ತಿಯ ಪತ್ನಿಗೆ ಪಂಚಾಯ್ತಿಯಲ್ಲಿ ಸವಾಲನ್ನೂ ಹಾಕಿದ್ದಾಳೆ. ಇದನ್ನು ಕೇಳಿದ ಆ ವ್ಯಕ್ತಿಯ ಪತ್ನಿ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾಳೆ. ಅಂತಿಮವಾಗಿ ಪತ್ನಿ ತನಗೆ ತನ್ನ ಗಂಡನಿಂದ 5 ಲಕ್ಷ ಜೀವನಾಂಶ ಬೇಕೆಂದು ಬೇಡಿಕೆ ಮುಂದಿಟ್ಟಿದ್ದಾಳೆ, ಇದನ್ನು ಕೇಳಿದ ಆರೋಪಿ ಮಹಿಳೆ ತಾನೇ 5 ಲಕ್ಷ ರೂ ನೀಡುತ್ತೇನೆ ಆದರೆ ನಿನ್ನ ಗಂಡನನ್ನು ಬಿಟ್ಟುಬಿಡು ಎಂದು ಷರತ್ತು ಹಾಕಿದ್ದಾಳೆ. ಇದಕ್ಕೆ ಒಪ್ಪಿದ ಮಹಿಳೆ ಮುಂದಿನ ತಿಂಗಳು ಹಣ ಕೊಟ್ಟು ನನ್ನ ಗಂಡನನ್ನು ಖರೀದಿಸಬಹುದೆಂದು ಹೇಳಿದ್ದಾಳೆ. ಮಹಿಳೆಯರ ಈ ತೀರ್ಮಾನಕ್ಕೆ ಎಲ್ಲರೂ ದಂಗಾಗಿದ್ದಾರೆ.

Leave a Reply

  Subscribe  
Notify of