53ನೇ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ಗೆ ಪ್ರಶಸ್ತಿ

Spread the love

‘ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ಗೆ ಪ್ರಶಸ್ತಿ’ 9 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 53ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ 9 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಬಾಲಕಿಯರ 16 ವಯೋಮಿತಿಯಲ್ಲಿ ದೀಪಾಶ್ರೀ 3ನೇ ಸ್ಥಾನ, 18ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಮಾಲಾಶ್ರೀ 4ನೇ ಸ್ಥಾನ, ಚೈತ್ರಾ ಪಿ. 5ನೇ ಸ್ಥಾನ, ಸಂಧ್ಯಾ 7ನೇ ಸ್ಥಾನ, ರಕ್ಷಿತಾ 10ನೇ ಸ್ಥಾನ, 18 ವಯೋಮಿತಿ ಬಾಲಕರ ವಿಭಾಗದಲ್ಲಿ ಅಸ್ಲಾಮ್ ಮುಲ್ತಾನಿ 2ನೇ ಸ್ಥಾನ, ಸತೀಶ್ 7ನೇ ಸ್ಥಾನ.

20 ವಯೋಮಿತಿಯಲ್ಲಿ ಬಾಲಕಿಯರ ವಿಭಾಗದಲ್ಲಿ ಚೈತ್ರಾ ಡಿ. ಪ್ರಥಮ ಸ್ಥಾನ, ಪ್ರಿಯಾ ಎಲ್.ಡಿ 3ನೇ ಸ್ಥಾನ, ಜಯಲಕ್ಷ್ಮೀ 9ನೇ ಸ್ಥಾನ, ರೇಷ್ಮಾ 10ನೇ ಸ್ಥಾನ, ಪುರುಷರ ವಿಭಾಗದಲ್ಲಿ ರಂಜಿತ್ ಸಿಂಗ್ ಪ್ರಥಮ ಸ್ಥಾನ, ಅನಿಲ್ 9ನೇ ಸ್ಥಾನ, ಪ್ರವೀಣ್ 10ನೇ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಶಾಲಿನಿ 3ನೇ ಸ್ಥಾನ, ದೀಕ್ಷಾ 4ನೇ ಸ್ಥಾನ, ಅರ್ಪಿತಾ 5ನೇ ಸ್ಥಾನ, ಪಡೆಯುವುದರೊಂದಿಗೆ ಮಹಿಳೆಯರ, 20 ವಯೋಮಿತಿಯ ಬಾಲಕಿಯರ, 18 ವಯೋಮಿತಿಯ ಬಾಲಕಿಯರ ತಂಡ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.


Spread the love