75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಭಿವೃದ್ಧಿ ಕಾಮಗಾರಿ ಶಾಸಕ ಕಾಮತ್ ಲೋಕಾರ್ಪಣೆ

75 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಅಭಿವೃದ್ಧಿ ಕಾಮಗಾರಿ ಶಾಸಕ ಕಾಮತ್ ಲೋಕಾರ್ಪಣೆ

ಮಂಗಳೂರು:  ಮಹಾನಗರ ಪಾಲಿಕೆ ವ್ಯಾಪ್ತಿಯ 54 ನೇ ಜಪ್ಪಿನಮೊಗರು ವಾರ್ಡಿನ ರಾಷ್ಟ್ರೀಯ ಹೆದ್ದಾರಿಯಿಂದ ಕಡೆಕಾರು ಮಲ್ಲಿಕಾರ್ಜುನ ದೇವಸ್ಥಾನ ಮತ್ತು ತಾರ್ದೋಲ ರಸ್ತೆಗೆ ಅಂದಾಜು ಸುಮಾರು 75 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆದ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಶಾಸಕರೊಂದಿಗೆ ಜೆ ಸುರೇಂದ್ರ, ವಸಂತ ಜೆ ಪೂಜಾರಿ, ರಾಜೇಶ್ ಸಪಲ್ಯ, ನವೀನ್ ಸುವರ್ಣ, ರಾಜೇಶ ತಾಂಡೋಲಿಗೆ, ರಾಮಪ್ರಸಾದ್, ಸಂದೇಶ್ ಶೆಟ್ಟಿ, ಪುಷ್ಪರಾಜ್ ಅಮೀನ್, ಮಧು ಕಂಬಿಸ್ತಾನ, ರಾಜೇಶ್ ಕರ್ಕೇರ, ನವೀನ್ ಕೊಟ್ಟಾರಿ, ಹರೀಶ್ ಕಡೆಕಾರ್, ಹರೀಶ್ ಗೌರಿ ಶಂಕರ್, ಕೃಷ್ಣ ಶೆಟ್ಟಿ, ಸುಮತಿ, ವೀಣಾ ಮಂಗಳ, ಸುಜಾತ ಕೊಟ್ಟಾರಿ, ಸ್ನೇಹಾ, ಸವಿತಾ ಶೆಟ್ಟಿ, ದೀಪಕ್, ಶ್ಯಾಮ ಪ್ರಸಾದ್, ಶಿವಾನಂದ ಪುತ್ರನ್, ಪುರಂದರ ಶೆಟ್ಟಿ, ದಯಾನಂದ ರಾವ್, ಉಮೇಶ್, ನಿತೇಶ್, ಹರೀಶ್ ಬಜಾಲ್, ದಿನಕರ್, ರಿತೇಶ್ ಆರ್.ಕೆ, ಪ್ರವೀಣ್ ತೊಂಡಲಿಗೆ, ಗ್ಲಾಡ್ವೀನ್ ಡಿಸಿಲ್ವ, ವೀಣಾ, ಮಂಗಳ, ಸ್ನೇಹ ಉಪಸ್ಥಿತರಿದ್ದರು.