ಲಾಕ್ ಡೌನ್ ; ಉಡುಪಿಯಲ್ಲಿ ಹಸಿವಿನಿಂದ ಬಳಲುತ್ತಿದ್ದರೆ ಸಂಪರ್ಕಿಸಿ – ಜಿಲ್ಲಾಧಿಕಾರಿ ಮನವಿ

Spread the love

ಲಾಕ್ ಡೌನ್ ; ಉಡುಪಿಯಲ್ಲಿ ಹಸಿವಿನಿಂದ ಬಳಲುತ್ತಿದ್ದರೆ ಸಂಪರ್ಕಿಸಿ – ಜಿಲ್ಲಾಧಿಕಾರಿ ಮನವಿ

ಉಡುಪಿ: ಕೋರೊನಾ ಸೋಂಕು ಹರಡಂತೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಜಿಲ್ಲೆಯ ಹಲವಾರು ಕಡೆ ನಿರ್ಗತಿಕರು, ಕೂಲಿ, ವಲಸೆ ಕಾರ್ಮಿಕರು, ಭಿಕ್ಷುಕರು ಊಟಕ್ಕೆ ಪರದಾಡುವ ಪರಿಸ್ಥಿತಿಯಿದ್ದು ಈಗಾಗಲೇ ಹಲವರು ವಿವಿಧ ರೀತಿಯಲ್ಲಿ ಅಂತಹವರಿಗೆ ನೆರವು ನೀಡುವ ಕೆಲಸವನ್ನು ಉಡುಪಿ ಜಿಲ್ಲೆಯಲ್ಲಿ ಪ್ರಾಮಾಣಿಕವಾಗಿ ನಡೆಯುತ್ತಿದೆ.

ಪ್ರತಿ ನಿತ್ಯ ಸಾವಿರಾರು ಮಂದಿ ವಿವಿಧ ದಾನಿಗಳ ಮೂಲಕ ಮಧ್ಯಾಹ್ನ ಹಾಗೂ ಸಂಜೆಯ ಊಟವನ್ನು ಪಡೆಯುತ್ತಿದ್ದಾರೆ. ಇದರ ನಡುವೆ ದೇಶದ ಪ್ರಧಾನಿ ಕೂಡ ಭಾನುವಾರ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಯಾರೂ ಕೂಡ ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ಇರದಂತೆ ಜಿಲ್ಲಾಡಳಿತಗಳು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಅದರಂತೆ ಉಡುಪಿಯ ಜಿಲ್ಲಾಡಳಿತ ಕೂಡ ಯಾರೂ ಕೂಡ ಲಾಕ್ ಡೌನ್ ಸಮಯದಲ್ಲಿ ಹಸಿವಿನಿಂದ ನರಳಬಾರದು ಎನ್ನುವ ನಿಟ್ಟಿನಲ್ಲಿ ವಿಶೇಷ ಯೋಜನೆಯನ್ನು ರೂಪಿಸಿದ್ದು ಯಾರಾದರೂ ಉಡುಪಿ ಜಿಲ್ಲೆಯಲ್ಲಿ ಊಟಕ್ಕೆ ಪರದಾಡುತ್ತಿದ್ದರೆ ಈ ಕೇಳಗಿನ ದೂರವಾಣಿಗಳಿಗೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ವಿನಂತಿಸಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು – 9488780000, 9480878001, 9480878002, 9480878004


Spread the love

1 Comment

  1. The biriyani rice picture is clearly to take the micky out of the craving public, isn’t it?

Comments are closed.