ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಂದ ದ.ಕ.ಜಿಲ್ಲಾಡಳಿತಕ್ಕೆ ಎಚ್ಚರಿಕೆ

Spread the love

ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಂದ ದ.ಕ.ಜಿಲ್ಲಾಡಳಿತಕ್ಕೆ ಎಚ್ಚರಿಕೆ

ಮಂಗಳೂರು:ದ.ಕ. ಜಿಲ್ಲಾ ಆಡಳಿತವು ಈಗಾಗಲೇ ಕೇರಳಾ ರಾಜ್ಯದ ಮನವಿಗೆ ಸ್ಪಂದಿಸಿ ದ.ಕ.ಜಿಲ್ಲೆಯ ಪ್ರಸಿದ್ಧ ಮೆಡಿಕಲ್ ಆಸ್ಪತ್ರೆಗಳಲ್ಲಿ ಒಂದಾದ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೇರಳಾ ಮೂಲದ ರೋಗಿಗಳಿಗೆ ಇಡೀ ಆಸ್ಪತ್ರೆಯನ್ನು ಬಿಟ್ಟು ಕೊಟ್ಟಿದೆ. ಕೇರಳಾ ರಾಜ್ಯದ ಕಾಸರಗೋಡ್ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯಲಾಗದೇ ಅಸಹಾಯಕ ಪರಿಸ್ಥಿತಿಯಲ್ಲಿರುವ ಕಾರ್ಡಿಯಾ ಸಮಸ್ಯೆ , ಹೃದಯ ಸಂಬಂಧಿ ಕಾಯಿಲೆಗಳಿಗೆ, ಅಪಘಾತ ಹಾಗೂ ಇನ್ನಿತರ ತುರ್ತು ಚಿಕಿತ್ಸೆಗೆ ಸ್ಫಂದಿಸಲು ದೇರಳಕಟ್ಟೆ ಯಲ್ಲಿರುವ ಕೆ.ಎಸ್.ಹೆಗ್ಡೆ ಆಸ್ಪತ್ರೆಯನ್ನು ಚಿಕಿತ್ಸೆಗಾಗಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದ.ಕ ಜಿಲ್ಲೆಯಲ್ಲಿ ಹಲವಾರು ತಾಲೂಕುಗಳು ಇದ್ದು ಬೆಳ್ತಂಗಡಿ, ಸುಳ್ಯ , ಕಡಬ, ಪುತ್ತೂರು, ಬಂಟ್ವಾಳ, ಮೂಡಬಿದ್ರಿ ಹಾಗೂ ಮಂಗಳೂರು ತಾಲೂಕಿನಲ್ಲಿರುವ ಜನರು ತಮ್ಮ ಆರೋಗ್ಯ ಸಮಸ್ಯೆ ತಲೆದೋರಿದಾಗ ನಮ್ಮ ಜಿಲ್ಲೆಯ ಖಾಸಗಿ ಆಸ್ಪತ್ರೆಯನ್ನು ಅವಲಂಭಿಸಿರುತ್ತಾರೆ.

ದ.ಕ.ಜಿಲ್ಲಾಡಳಿತ ಬಿ.ಜೆ.ಪಿ ಸರಕಾರದ ಒತ್ತಡಕ್ಕೆ ಮಣಿದು ಮುಂದೇನಾದರೂ ಮೃದು ದೋರಣೆ ತೋರಿ , ಇನ್ನೂ ಹೆಚ್ಚಿನ ಖಾಸಗಿ ಆಸ್ಪತ್ರೆಯನ್ನು ಕೇರಳದ ರೋಗಿಗಳಿಗೆ ಮೀಸಲಿಟ್ಟರೆ ನಮ್ಮ ಜಿಲ್ಲೆಯ ಜನರು ಸಂಕಷ್ಟಕ್ಕೀಡಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಜಿಲ್ಲೆಯ ಜನತೆ ಕಾಸರಗೋಡಿನ ಜನರ ಆರೋಗ್ಯದ ದೃಷ್ಟಿಕೋನದಿಂದ ಈಗಾಗಲೇ ಹೃದಯ ಶ್ರೀಮಂತಿಕೆಯನ್ನು ತೋರಿಸಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯನ್ನು ಅಲ್ಲಿನ ಜನರ ಚಿಕಿತ್ಸೆಗಾಗಿ ಅನುವು ಮಾಡಿ ಕೊಟ್ಟಿದ್ದಾರೆ. ಬಹುಷ ಇವತ್ತು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳಲ್ಲಿ ಕೊರೋನಾ ಸೋಂಕಿತರು ರೋಗಿಗಳು ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದರಿಂದ ನಮ್ಮ ಜಿಲ್ಲೆಯ ಖಾಸಗಿ ಆಸÀ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಗಳ ಹಾಗೂ ಡಾಕ್ಟರ್‍ಗಳ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಗಳಿವೆ.

ಮಂಗಳೂರು ನಗರಕ್ಕೆ ಅರಬ್ ರಾಷ್ಟ್ರದಿಂದ ಶೇ.65 ರಷ್ಟು ಕೇರಳಾ ಮೂಲದವರು ಶೇ.35 ರಷ್ಟು ನಮ್ಮ ಜಿಲ್ಲೆಯವರಾಗಿದ್ದಾರೆ. ದ.ಕ ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ಆಶಾ ಕಾರ್ಯಕರ್ತೆಯರ ಸಹಾಯದಿಂದ ಕ್ವಾರಂಟೈನ್‍ನ್ನು ಶಿಸ್ತುಬದ್ಧವಾಗಿ ಪಾಲಿಸಿ ಜಿಲ್ಲೆಯಲ್ಲಿ ಕೋರೋನಾ ಮಾಹಾಮಾರಿಯು ಹರಡದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಮ್ಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಕೇರಳಾ ಮೂಲದ ಯಾತ್ರಿಗಳಿಗೆ ಕ್ವಾರಂಟೈನ್ ವಿಧಿಸಿ ಈ ಯಾತ್ರಿಗಳು ಸರಿಯಾದ ರೀತಿಯಲ್ಲಿ ಹೋಂ ಕ್ವಾರಂಟೈನ್‍ನ್ನು ಪಾಲಿಸದ ಕಾರಣ ಕಾಸರಗೋಡ್ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯಕ್ಕಿಂತ ಜಾಸ್ತಿ ಜನರು ಕೋವಿಡ್ – 19 ಈಢಾಗಿದ್ದಾರೆ.

ನಮ್ಮ ಜಿಲ್ಲೆಯ ನೆರೆಯ ಜಿಲ್ಲೆಗಳಾದ ಉಡುಪಿ, ಕೊಡಗು , ಚಿಕ್ಕಮಗಳೂರು ಜನರು ಕೂಡಾ ಆರೋಗ್ಯದ ಸಮಸ್ಯೆ ಬಂದಾಗ ಆರೋಗ್ಯ ತಪಾಸಣೆಗಾಗಿ ಮಂಗಳೂರಿನ ಆಸ್ಪತ್ರೆಗಳನ್ನೇ ಅವಲಂಭಿಸಿದ್ದಾರೆ.ಆದುದರಿಂದ ಜಿಲ್ಲಾಡಳಿತ ಹಾಗೂ ಸರಕಾರ ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿಯದೇ ನಮ್ಮ ಜಿಲ್ಲೆಯ ಆರೋಗ್ಯದ ದೃಷ್ಠಿಕೋನವನ್ನು ಇಟ್ಟುಕೊಂಡು ಕೆಲಸ ಮಾಡಬೇಕಾಗಿದೆ.

ಒಂದು ವೇಳೆ ಮಂಗಳೂರಿನಲ್ಲಿರುವ ಇನ್ನಿತರ ಖಾಸಗಿ ಆಸ್ಪತ್ರೆಗಳನ್ನು ಕೂಡಾ ಕಾಸರಗೋಡಿನ ಜನರ ಚಿಕಿತ್ಸೆಗಾಗಿ ಅವಕಾಶ ನೀಡಿದ್ದಲ್ಲಿ ಇದರ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಮಾಧ್ಯಮದ ಮೂಲಕ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ಯವರು ತಿಳಿಸಿದ್ದಾರೆ.


Spread the love

2 Comments

Comments are closed.