ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದಲ್ಲಿ ಮುದ ನೀಡಿದ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದ ಗಾಯನ

Spread the love

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದಲ್ಲಿ ಮುದ ನೀಡಿದ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದ ಗಾಯನ

ಮಂಗಳೂರು ಪುರಭವನದಲ್ಲಿ ನವೆಂಬರ್ 14ರ ಶನಿವಾರ ನಡೆದ ಐತಿಹಾಸಿಕ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದ ಗಾಯನ ತಂಡವು ಭಕ್ತಿಭಾವಪೂರ್ಣ ಮತ್ತು ಮಧುರ ಸಂಗೀತದ ಮೆರುಗು ನೀಡಿತು.

ಪ್ರಮುಖ ಕೊಂಕಣಿ ಸಾಂಸ್ಕೃತಿಕ ಸಂಸ್ಥೆಯಾದ ಮಾಂಡ್ ಸೊಭಾಣ್ ಆಯೋಜಿಸಿರುವ ಈ 12 ದಿನಗಳ ಸಂಗೀತ ಮ್ಯಾರಥಾನ್ ನವೆಂಬರ್ 3ರಂದು ಆರಂಭಗೊಂಡಿದ್ದು, ಕರ್ನಾಟಕ, ಗೋವಾ ಮತ್ತು ಕೇರಳದ ಗಾಯನ ತಂಡಗಳು ಭಾಗವಹಿಸಿ ನಿರಂತರ ಕೊಂಕಣಿ ಸಂಗೀತ ಸಂಭ್ರಮಕ್ಕೆ ಸಾಕ್ಷಿಯಾಗಿವೆ.

ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದ ಗಾಯನ ತಂಡವು ಒಟ್ಟು 14 ಗೀತೆಗಳನ್ನು ಪ್ರಸ್ತುತಪಡಿಸಿತು.

ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ರಮೇಶ್ ನಾಯಕ್ ಮಾತನಾಡಿ ಇಂದು ನಮ್ಮ ಕೊಂಕಣಿ ಸಮುದಾಯಕ್ಕೆ ವಿಶೇಷ ದಿನವಾಗಿದೆ. ನಾವು ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದವರು ವಿಶ್ವ ಕೊಂಕಣಿ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಮಾಂಡ್ ಸೊಭಾಣ್ ಸಂಸ್ಥೆಯ ಅಧ್ಯಕ್ಷರಾದ ಲೂಯಿಸ್ ಜೆ ಪಿಂಟೊ ಹಾಗೂ ಅವರ ತಂಡದವರಿಗೆ ಅಭಿನಂದನೆಗಳು. ಒಂದು ಸಂಗೀತ ಭಾಷೆ ಮತ್ತು ಸೌಹಾರ್ದತೆಗೆ ಸಹಕಾರಿಯಾಗುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಪ್ರಮುಖ ಉದಾಹರಣೆಯಾಗಿದೆ. ಇಡೀ ಭಾರತದಲ್ಲಿ ನಾವು ಇರುವುದು ಸೀಮಿತ ಸಂಖ್ಯೆಯ ಜನತೆಯಾದರೂ ಈ ಗಿನ್ನೆಸ್ ದಾಖಲೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅತೀವ ಸಂತೋಷ ತಂದಿದೆ ಎಂದರು.

ಲೂಯಿ ಜೆ ಪಿಂಟೊ ಮಾತನಾಡಿ ಇಂದು ನಮ್ಮೊಂದಿಗೆ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದವರು ವಿಶ್ವ ಕೊಂಕಣಿ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವರೆಗೆ ಅವರ ಸಮಾಜದಲ್ಲಿ ಯಾವುದೇ ಕೊಂಕಣಿ ಸಾಹಿತ್ಯ ಇಲ್ಲದೆ ಹೋದರು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂಬ ನಿಟ್ಟಿನಲ್ಲಿ ಸಾಹಿತ್ಯ ರಚಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದು ನಮಗೆ ಮಾಂಡ್ ಸೊಭಾಣ್ ಸಂಸ್ಥೆಗೆ ಅತ್ಯಂತ ಸಂತಸದ ಸಂಗತಿಯಾಗಿದೆ. ನಮ್ಮ ಸಂಸ್ಥೆ ವಿವಿಧ ಸಮುದಾಯಗಳನ್ನು ಜೋಡಿಸಿಕೊಂಡು ಹಿಂದುಳಿದ ಸಮುದಾಯವನ್ನು ಮುಖ್ಯವಾಹಿನಿಗೆ ತರಬೇಕು ಎನ್ನುವುದು ನಮ್ಮ ಆದ್ಯತೆಯಾಗಿದೆ. ಕುಡುಬಿ ಸಿದ್ದಿ ನವಾಯಿತಿ ಸಹಿತ ವಿವಿಧ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ಹಾಡುವ ಅವಕಾಶ ಲಭಿಸಿದೆ. ಪ್ರಸ್ತುತ ಹೊಸದಾಗಿ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಮಾಜದವರು ಭಾಗಿಯಾಗಿದ್ದಾರೆ ಎನ್ನಲು ಅತೀವ ಸಂತಸ ತಂದಿದೆ ಎಂದರು.


Spread the love
Subscribe
Notify of

0 Comments