ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ಎಂ.ಆರ್. ಪೂವಮ್ಮಗೆ ಅಭಿನಂದನೆಗಳ ಮಹಾಪೂರ; ಮುಖ್ಯಮಂತ್ರಿಗಳ ಕರೆಯಿಂದ ದೂರವಾಯ್ತು ಮನದ ಬೇಸರ!

Spread the love

ಏಷ್ಯನ್ ಗೇಮ್ಸ್ ಚಿನ್ನ ಗೆದ್ದ ಎಂ.ಆರ್. ಪೂವಮ್ಮಗೆ ಅಭಿನಂದನೆಗಳ ಮಹಾಪೂರ; ಮುಖ್ಯಮಂತ್ರಿಗಳ ಕರೆಯಿಂದ ದೂರವಾಯ್ತು ಮನದ ಬೇಸರ!

ಮಂಗಳೂರು: “ನಾನು ಪಟ್ಟ ಕಷ್ಟಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕೆ ಎಲ್ಲಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇದರಿಂದ ನನಗೆ ಅತ್ಯಂತ ಸಂತೋಷವಾಗುತ್ತಿದೆ,” ಎಂದು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಕರ್ನಾಟಕದ ಸಾಧಕಿ, ಓಟಗಾರ್ತಿ ಎಂ.ಆರ್. ಪೂವಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

YouTube player

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪದಕ ಗೆದ್ದ ತಕ್ಷಣ ಇತರ ರಾಜ್ಯಗಳ ಕ್ರೀಡಾಪಟುಗಳಿಗೆ ಅವರವರ ರಾಜ್ಯಗಳ ಮುಖ್ಯಮಂತ್ರಿಗಳಿಂದ ಕರೆ ಬಂದಿತ್ತು. ಆದರೆ ನನಗೆ ಕರೆ ಬಾರದೇ ಇದ್ದಾಗ ತುಸು ಬೇಸರ ಮತ್ತು ಭಾವುಕತೆ ಆವರಿಸಿತ್ತು. ಆದರೆ ನಂತರ ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಮಾತನಾಡಿದರು. ಜಪಾನ್ ನಲ್ಲಿದ್ದ ಕಾರಣ ಕರೆಗೆ ಟ್ರೈ ಮಾಡಿರಬಹುದು ಎಂದರು. ಇದೀಗ ಸಿಎಂ ಡಿಕೆ ಶಿಮಕುಮಾರ್ ಅವರ ಈ ಒಂದು ಕರೆಯಿಂದ ನನ್ನ ಮನದಲ್ಲಿದ್ದ ಎಲ್ಲ ಬೇಸರಗಳು ಕರಗಿಹೋದವು,” ಎಂದರು.

ಮುಂದುವರಿದು ಮಾತನಾಡಿದ ಪೂವಮ್ಮ, “ಮುಖ್ಯಮಂತ್ರಿಗಳು ತಾವು ಕೂಡ ಕ್ರೀಡಾಪಟುವಾಗಿದ್ದ ದಿನಗಳನ್ನು ನೆನಪಿಸಿಕೊಂಡು, ಅಥ್ಲೀಟ್‌ಗಳ ಕಷ್ಟ ಏನೆಂಬುದು ತಮಗೆ ಚೆನ್ನಾಗಿ ಗೊತ್ತು ಎಂದರು. ಅವರ ಬಗ್ಗೆ ನಾನು ಮುಂಚಿನಿಂದಲೂ ಕೇಳಿದ್ದೇನೆ, ಅವರು ಕ್ರೀಡಾಪಟುಗಳಿಗೆ ಸಾಕಷ್ಟು ನೆರವು ನೀಡಿದ್ದಾರೆ. ಮುಂಬರುವ ನನ್ನ ಅಥ್ಲೆಟಿಕ್ ಜೀವನಕ್ಕೂ ಸಂಪೂರ್ಣ ಬೆಂಬಲ ನೀಡುವ ಭರವಸೆ ಕೊಟ್ಟಿದ್ದಾರೆ. ಈ ಭರವಸೆಯು ದೇಶಕ್ಕಾಗಿ ಇನ್ನು ಹೆಚ್ಚಿನ ಪದಕಗಳನ್ನು ಗೆಲ್ಲಲು ನನಗೆ ಆನೆಬಲ ತಂದಿದೆ,” ಎಂದು ತಿಳಿಸಿದರು.

“ನನ್ನ ತುಳುನಾಡು, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಂದು ಮೂಲೆ ಮೂಲೆಯಿಂದಲೂ ನನಗೆ ಶುಭಾಶಯ ಸಂದೇಶಗಳು ಬರುತ್ತಿವೆ. ನನ್ನ ಮೇಲಿಟ್ಟಿರುವ ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಋಣಿ. ಬೆಂಬಲಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದು ಪೂವಮ್ಮ ಹೇಳಿದರು.


Spread the love
Subscribe
Notify of

0 Comments