ಬೈಂದೂರು ಶಾಸಕರ ರೈತ ವಿರೋಧಿ ನಡೆ : ಕೆ. ವಿಕಾಸ್ ಹೆಗ್ಡೆ

Spread the love

ಬೈಂದೂರು ಶಾಸಕರ ರೈತ ವಿರೋಧಿ ನಡೆ : ಕೆ. ವಿಕಾಸ್ ಹೆಗ್ಡೆ

ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರು ಇಲ್ಲದೆ ಅವರ ಅಧಿಕಾರವನ್ನು ಅನುಭವಿಸುತ್ತಿರುವ ರಾಜ್ಯದ ಶಾಸಕರುಗಳು ಕೇವಲ ಅಧಿಕಾರ ವೀಕೆಂದ್ರಿಕರಣದ ಬಗ್ಗೆ ಮಾತನಾಡುತ್ತಾರೆ ಬಿಟ್ಟರೆ ಅಧಿಕಾರ ಹಂಚಿಕೆಗೆ ಯಾವೊಬ್ಬ ಶಾಸಕರು ತಯಾರು ಇಲ್ಲಾ. ಇದರ ಇನ್ನೊಂದು ಭಾಗವೆ ಬೈಂದೂರು ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ವಿರುದ್ಧ ಬೈಂದೂರು ಶಾಸಕರು ನ್ಯಾಯಾಲಯದ ಮೊರೆ ಹೋದದ್ದು ಎಂದು ಕೆಪಿಸಿಸಿ ಸಂಯೋಜಕ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅಕ್ರಮ-ಸಕ್ರಮ ಯೋಜನೆ ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರು. ಈ ಯೋಜನೆಯನ್ನು ಸಮರ್ಪಕವಾಗಿ ತಮ್ಮ ಕ್ಷೇತ್ರದಲ್ಲಿ ಅನುಷ್ಠಾನ ಮಾಡಿ ಸಾವಿರಾರು ರೈತರಿಗೆ ಭೂಮಿಯ ಹಕ್ಕು ನೀಡಿದವರು ಹಿಂದಿನ ಬೈಂದೂರು ಶಾಸಕರಾದ ಕೆ. ಗೋಪಾಲ ಪೂಜಾರರು. ಅದೆಷ್ಟೋ ರೈತರಿಗೆ ಭೂಮಿಯ ಹಕ್ಕು ನೀಡಿದ ಮಾಜಿ ಶಾಸಕರು ಹೆಚ್ಚುವರಿ ಅಕ್ರಮ-ಸಕ್ರಮ ಸಮಿತಿ ರಚನೆ ಮಾಡಿದ್ದನ್ನು ಹಾಲಿ ಬೈಂದೂರು ಶಾಸಕರು ವಿರೋಧಿಸಿದ್ದು ಅವರ ಅಧಿಕಾರ ವೀಕೆಂದ್ರಿಕರಣದ ವಿರೋಧಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಅದೆಷ್ಟೋ ವರ್ಷಗಳಿಂದ ಅರ್ಜಿ ನಮೂನೆ: 50, 53 ಮತ್ತು 57 ರ ಅಡಿ ಭೂ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿ ಇಂದಿಗೂ ಭೂ ಮಂಜೂರಾತಿ ಆಗದೆ ಇರುವ ಸಾವಿರಾರು ಅರ್ಜಿದಾರರಿಗೆ ನ್ಯಾಯ ಕೊಡಬೇಕಾದ ಹಾಲಿ ಶಾಸಕರು ಅಧಿಕಾರದಾಸೆಗೆ ಹೆಚ್ಚುವರಿ ಸಮಿತಿ ವಿರುದ್ಧದ ನಡೆ ಅವರ ರೈತ ವಿರೋಧಿ ಕ್ರಮವಾಗಿದೆ. ಶಾಸಕರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಬಗ್ಗೆ ಕಾಳಜಿ ಇದ್ದರೆ ಹೆಚ್ಚುವರಿ ಸಮಿತಿ ವಿರುದ್ಧದ ತಮ್ಮ ಹೋರಾಟ ಕೈಬಿಟ್ಟು ರೈತರ ಪರ ನಿಲ್ಲಬೇಕು ಎಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments