ಪಶ್ಚಿಮ ವಲಯ ಐಜಿಪಿಯಾಗಿ ಚೇತನ್ ಆರ್ ಅಧಿಕಾರ ಸ್ವೀಕಾರ

Spread the love

ಪಶ್ಚಿಮ ವಲಯ ಐಜಿಪಿಯಾಗಿ ಚೇತನ್ ಆರ್ ಅಧಿಕಾರ ಸ್ವೀಕಾರ

ಮಂಗಳೂರು: ಪಶ್ಚಿಮ ವಲಯದ ನೂತನ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಡಿ.ಐ.ಜಿ.ಪಿ ಚೇತನ್ ಆರ್, ಐ.ಪಿ.ಎಸ್ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.

ನಿರ್ಗಮನ ಐಜಿಪಿ ಅಮಿತ್ ಸಿಂಗ್ ಅವರು ಪೊಲೀಸ್ ದಂಡವನ್ನು ನೀಡುವ ಮೂಲಕ ಚೇತನ್ ಆರ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು.

2010ರ ಐಪಿಎಸ್ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿ ಆರ್.ಚೇತನ್ ಅವರು ಈ ಹಿಂದೆ ಕರಾವಳಿ ಕಾವಲು ಪಡೆ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ನಿರ್ಗಮನ ಐಜಿಪಿ ಅಮಿತ್ ಸಿಂಗ್ ಅವರಿಗೆ ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ಇದರ ಐಜಿಪಿ ಆಗಿ ವರ್ಗಾವಣೆಯಾಗಿದೆ.


Spread the love
Subscribe
Notify of

0 Comments