ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

Spread the love

ದ.ಕ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಮಂಗಳೂರು : ಶಿಕ್ಷಕರ ದಿನಾಚರಣೆಯ ಹಿನ್ನಲೆಯಲ್ಲಿ ಕೊಡಮಾಡುವ ದ.ಕ.ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯ ಪಟ್ಟಿಯನ್ನು ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಆಡಳಿತ)ರು ಇಂದು ಪ್ರಕಟಿಸಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ, ಹಿರಿಯ ಪ್ರಾಥಮಿಕ ಶಾಲಾ ವಿಭಾಗ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 7ರಂತೆ ಒಟ್ಟು 21 ಮಂದಿಗೆ ಪ್ರಶಸ್ತಿಯನ್ನು ಘೋಷಿಸಲಾಗಿದ್ದು, ಸೆ.5ರಂದು ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಂಟ್ವಾಳ ತಾಲೂಕಿನ ಸೇರ್ಕಳ ಶಾಲೆಯ ಸಹಶಿಕ್ಷಕ ದಾಮೋದರ, ಬೆಳ್ತಂಗಡಿ ತಾಲೂಕಿನ ಮುಂಡ್ರುಪಾಡಿ ಶಾಲೆಯ ಸಹ ಶಿಕ್ಷಕಿ ಚಿತ್ರಪ್ರಭಾ, ಮಂಗಳೂರು ಉತ್ತರ ವಲಯದ ಸ್ಯಾಂಡ್‌ಪೀಟ್ ಶಾಲೆಯ ಸಹಶಿಕ್ಷಕಿ ಉಮಾಲಕ್ಷ್ಮಿ, ಮಂಗಳೂರು ದಕ್ಷಿಣ ವಲಯದ ಬದ್ರಿಯಾನಗರ ಶಾಲೆಯ ಸಹ ಶಿಕ್ಷಕಿ ಪ್ಲೇವಿ ಜೆಸಿಂತ ಮಿರಾಂದ, ಮೂಡುಬಿದಿರೆ ತಾಲೂಕಿನ ಪೆಂಜಾರಿನ ಸಹ ಶಿಕ್ಷಕಿ ಶ್ರೀವಾಣಿ, ಪುತ್ತೂರು ತಾಲೂಕಿನ ಹೊಸ್ತೋಟ ಶಾಲೆಯ ಸಹ ಶಿಕ್ಷಕಿ ಮಾಲತಿ, ಸುಳ್ಯ ತಾಲೂಕಿನ ಪಾಂಡಿಗದ್ದೆ ಶಾಲೆಯ ಸಹ ಶಿಕ್ಷಕ ಯಶೋಧರ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಂಟ್ವಾಳ ತಾಲೂಜಿನ ವಿಟ್ಲ ಪಿಎಂಶ್ರೀ ಶಾಲೆಯ ಸಹಶಿಕ್ಷಕ ವಿದ್ಯಾಶಂಕರ್ ಡಿ., ಬೆಳ್ತಂಗಡಿ ತಾಲೂಕಿನ ಅಂಡೆತಡ್ಕ ಶಾಲೆಯ ಮುಖ್ಯಶಿಕ್ಷಕ ಕೃಷ್ಣಪ್ಪ ಪೂಜಾರಿ, ಮಂಗಳೂರು ಉತ್ತರ ವಲಯದ ಕಾಟಿಪಳ್ಳ ಶಾಲೆಯ ಸಹ ಶಿಕ್ಷಕಿ ಇಂದಿರಾ ಎಸ್., ಮಂಗಳೂರು ದಕ್ಷಿಣ ವಲಯದ ಉಚ್ಚಿಲಗುಡ್ಡೆಯ ಸಹ ಶಿಕ್ಷಕ ಹರೀಶ್ ಕುಮಾರ್ ಬಿ.ಎಂ., ಪುತ್ತೂರು ತಾಲೂಕಿನ ಸಾಮೆತ್ತಡ್ಕ ಶಾಲೆಯ ಸಹ ಶಿಕ್ಷಕಿ ಭುವನೇಶ್ವರಿ ಕೆ.

ಪ್ರೌಢಶಾಲಾ ವಿಭಾಗ: ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ ವಿಜಯಲಕ್ಷ್ಮಿ, ಬೆಳ್ತಂಗಡಿ ತಾಲೂಕಿನ ವೇಣೂರು ಪ್ರೌಢಶಾಲೆಯ ಸಹ ಶಿಕ್ಷಕ ರವೀಂದ್ರ ಕೆ., ಮಂಗಳೂರು ಉತ್ತರ ವಲಯದ ಸಂತ ಅಲೋಶಿಯಸ್ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಪ್ರವೀಣ್ ಕುಟಿನ್ಹೋ, ಮಂಗಳೂರು ದಕ್ಷಿಣ ವಲಯದ ಮುಚ್ಚೂರು ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಕಿಶೋರ್, ಮೂಡುಬಿದಿರೆ ಮೂಡುಮಾರ್ನಾಡು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಜಾನ್ ರೊನಾಲ್ಡ್ ಡಿಸೋಜ, ಪುತ್ತೂರು ತಾಲೂಕಿನ ನೆಲ್ಯಾಡಿ ಸಂತ ಜಾರ್ಜ್ ಪ್ರೌಢಶಾಲೆಯ ಸಹ ಶಿಕ್ಷಕ ಥಾಮಸ್ ಎಂ.ಐ., ಸುಳ್ಯ ತಾಲೂಕಿನ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಕಿಶೋರ್ ಕುಮಾರ್.


Spread the love
Subscribe
Notify of

0 Comments