ದ.ಕ.ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ: ಶೇ.25 ಬೋನಸ್ ಹಾಗೂ ಶೇ.14 ಡಿವಿಡೆಂಟ್ ಘೋಷಣೆ

Spread the love

ದ.ಕ.ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ: ಶೇ.25 ಬೋನಸ್ ಹಾಗೂ ಶೇ.14 ಡಿವಿಡೆಂಟ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 2025-26ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಬುಧವಾರ ಕುಲಶೇಖರ ಕೋರ್ಡೆಲ್ ಹಾಲ್ನಲ್ಲಿ ನಡೆಯಿತು.

ಒಕ್ಕೂಟವು 2025-26ನೇ ಸಾಲಿನಲ್ಲಿ ಒಟ್ಟು ರೂ. 1270.53 ಕೋಟಿಯ ವಾರ್ಷಿಕ ವಹಿವಾಟು ಮಾಡಿ ರೂ.10.61 ಕೋಟಿ ನಿವ್ವಳ ಲಾಭ ಗಳಿಸಿದ್ದು ಕಳೆದ ಸಾಲಿಗೆ ಹೋಲಿಕೆ ಮಾಡಿದಾಗ ಶೇ.8.25 ರಷ್ಟು ಪ್ರಗತಿ ಸಾಧಿಸಿರುತ್ತದೆ. ಹಾಲು ಉತ್ಪಾದಕರಿಗೆ ಹಾಲಿನ ಖರೀದಿಗೆ ವಿಶೇಷ ಪ್ರೋತ್ಸಾಹ ಧನ ರೂಪದಲ್ಲಿ ರೂ.23.89ಕೋಟಿ ಹಾಗೂ ವಿವಿಧ ಅನುದಾನಗಳ ರೂಪದಲ್ಲಿ ರೂ.11.55 ಕೋಟಿಯೊಂದಿಗೆ ಒಟ್ಟು ರೂ.35.44 ಕೋಟಿ ನೀಡಲಾಗಿರುತ್ತದೆ. ಸಭೆಯಲ್ಲಿ ಶೇ.25 ಬೋನಸ್ ಹಾಗೂ ಡಿವಿಡೆಂಟ್ ಶೇ.14ರಂತೆ ರೂ.2,91,38,242 ಡಿವಿಡೆಂಟ್ ಘೋಷಣೆ ಮಾಡಲಾಯಿತು. ಒಕ್ಕೂಟವು ಹಾಲಿನ ಗುಣಮಟ್ಟದಲ್ಲಿ ಮತ್ತು ಹಾಲಿಗೆ ಅತ್ಯಧಿಕ ದರ ನೀಡುವುದರಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿದೆ.

ವರದಿ ಸಾಲಿನಲ್ಲಿ ಹಾಲು ಸಂಗ್ರಹಣೆ ಗುಣಮಟ್ಟ ಪ್ರೋತ್ಸಾಹಧನವಾಗಿ ರೂ. 221.41 ಲಕ್ಷಗಳನ್ನು ಸಂಘಗಳ ಸಿಬ್ಬಂದಿಗಳಿಗೆ ನೀಡಲಾಗಿದ್ದು ರೈತ ಕಲ್ಯಾಣ ಟ್ರಸ್ಟ್ನ ಮೂಲಕ ರೈತರ ಮರಣ, ರಾಸುಗಳ ಮರಣ, ವೈದ್ಯಕೀಯ ವೆಚ್ಚ, ಹಟ್ಟಿ ಹಾನಿಗೆ ಹಾಗೂ ರೈತರ ಮಕ್ಕಳ ಶಿಕ್ಷಣಕ್ಕೆ ರೂ.1.25 ಕೋಟಿ ಪ್ರೋತ್ಸಾಹಧನವನ್ನು ನೀಡಲಾಗಿದೆ. ರೈತರಿಗೆ ಹಸಿರು ಮೇವಿನ ಅಭಾವ ಇರುವುದನ್ನು ಮನಗಂಡು ಒಕ್ಕೂಟದಿಂದ ದರ ನಿಗದಿಪಡಿಸಿ ರಸಮೇವನ್ನು ಸರಬರಾಜು ಮಾಡಲಾಗುತ್ತಿದೆ.

ಒಕ್ಕೂಟ/ಜಿಲ್ಲೆಯ ಅತ್ಯುತ್ತಮ ಹಾಲು ಉತ್ಪಾದಕರ ಸಹಕಾರ ಸಂಘ/ ಮಹಿಳಾ ಸಹಕಾರ ಸಂಘ/ ಉತ್ತಮ ಹೈನುಗಾರರು/ಉತ್ತಮ ಗುಣಮಟ್ಟದ ಸಂಘಗಳು ಮತ್ತು ಉತ್ತಮ ಕೃತಕ ಗರ್ಭಧಾರಣಾ ಕಾರ್ಯಕರ್ತರನ್ನು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಹಾಲು ಉತ್ಪಾದಕರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.

ಒಕ್ಕೂಟದ ಅತ್ಯುತ್ತಮ ಸಂಘ – ಉಡುಪಿ ಜಿಲ್ಲೆಯ ಹಾಳೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ.
ಜಿಲ್ಲಾವಾರು ಉತ್ತಮ ಸಂಘ- ದ.ಕ ಜಿಲ್ಲೆಯ ಕಡಂದಲೆ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉಡುಪಿ ಜಿಲ್ಲೆಯ ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘ
ಒಕ್ಕೂಟದ ಉತ್ತಮ ಮಹಿಳಾ ಸಂಘ – ದ.ಕ ಜಿಲ್ಲೆಯ ಬಂದಾರು ಮತ್ತು ಉಡುಪಿ ಜಿಲ್ಲೆಯ ಆರೂರು ಮಹಿಳಾ ಸಹಕಾರ ಸಂಘ
ಜಿಲ್ಲಾವಾರು ಉತ್ತಮ ಬಿಎಂಸಿ – ದ.ಕ ಜಿಲ್ಲೆಯ ನೆರಿಯ ಮತ್ತು ಉಡುಪಿ ಜಿಲ್ಲೆಯ
ಮೇಕೋಡು ಹಾಲು ಉತ್ಪಾದಕರ ಸಹಕಾರ ಸಂಘ
ಒಕ್ಕೂಟದ ಉತ್ತಮ ಹೈನುಗಾರರು: ಮೇಕೋಡು ಹಾಲು ಉತ್ಪಾದಕರ ಸಂಘದ ಎಸ್. ಪ್ರಕಾಶ್ಚಂದ್ರ ಶೆಟ್ಟಿÀ, ಪಿಲಿಗೂಡು ಹಾಲು ಉತ್ಪಾದಕರ ಸಂಘದ ಜಮೀಲ ಹಾಗೂ ಬೆಳಪು ಹಾಲು ಉತ್ಪಾದಕರ ಸಹಕಾರ ಸಂಘದ ಡಾ. ದೇವಿಪ್ರಸಾದ್ ಶೆಟ್ಟಿ.

ಸಭೆಯಲ್ಲಿ ನಿರ್ದೇಶಕರಾದ ಸರ್ವಶ್ರೀ ಕೆ.ಪಿ., ಸುಚರಿತ ಶೆಟ್ಟಿ, ಎಸ್.ಬಿ. ಜಯರಾಮ ರೈ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಡಾ. ಐಕಳಬಾವ ದೇವಿಪ್ರಸಾದ್ ಶೆಟ್ಟಿ, ಎನ್. ಮಂಜಯ್ಯ ಶೆಟ್ಟಿ, ಬಿ. ಸುಧಾಕರ ರೈ, ಸವಿತ ಎನ್. ಶೆಟ್ಟಿ, ಎಂ. ಸುಧಾಕರ ಶೆಟ್ಟಿ, ಕೆ. ಚಂದ್ರಶೇಖರ ರಾವ್, ಕೆ. ಶಿವಮೂರ್ತಿ, ನಂದರಾಮ್ ರೈ, ಮಮತಾ ಆರ್ ಶೆಟ್ಟಿ, ಎಚ್. ಪ್ರಭಾಕರ, ಭರತ್ ಎನ್, ಜಗನ್ನಾಥ ಶೆಟ್ಟಿ ನಡುಮನೆ ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್. ರಮೇಶ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಅರುಣ್ಕುಮಾರ್ ಶೆಟ್ಟಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ರವಿರಾಜ ಉಡುಪ ಉಪಸ್ಥಿತರಿದ್ದರು. ಒಕ್ಕೂಟದ ಉಪಾಧ್ಯಕ್ಷÀ ಉದಯ ಎಸ್.ಕೋಟ್ಯಾನ್ ಸ್ವಾಗತಿಸಿದರು


Spread the love
Subscribe
Notify of

0 Comments