ಉಡುಪಿ ಜಿಲ್ಲಾ ಎಸ್ ಸಿ. ಎಸ್ ಎಸ್ಟಿ ದೌರ್ಜನ್ಯ ತಡೆ ಜಾಗೃತಿ ಸಮಿತಿ ಸದಸ್ಯರಾಗಿ ಡಾ. ಜೆರಾಲ್ಡ್ ಪಿಂಟೊ ನೇಮಕ

Spread the love

ಉಡುಪಿ ಜಿಲ್ಲಾ ಎಸ್ ಸಿ. ಎಸ್ ಎಸ್ಟಿ ದೌರ್ಜನ್ಯ ತಡೆ ಜಾಗೃತಿ ಸಮಿತಿ ಸದಸ್ಯರಾಗಿ ಡಾ. ಜೆರಾಲ್ಡ್ ಪಿಂಟೊ ನೇಮಕ

ಉಡುಪಿ: ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಸದಸ್ಯರನ್ನಾಗಿ ಸಮಾಜದ ವಿವಿಧ ಮುಖಂಡರುಗಳನ್ನು ಜಿಲ್ಲಾಧಿಕಾರಿಗಳು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಜಿಲ್ಲಾಧಿಕಾರಿ ಸ್ವರೂಪಾ ಟಿಕೆ ಸಮಿತಿಯ ಅಧ್ಯಕ್ಷರಾಗಿದ್ದು, ಇತರ ಸದಸ್ಯರ ವಿವರ ಇಂತಿದೆ

ಸುನೀತಾ ಹೆಬ್ರಿ, ಪರಮೇಶ್ವರ ತೆಂಕಬೆಟ್ಟು, ಬ್ರಹ್ಮಾವರ, ಕೆ ಸಿ ರಾಜು ಬೆಟ್ಟಿನ ಮನೆ ವಕ್ವಾಡಿ, ಕುಂದಾಪುರ (ಪರಿಶಿಷ್ಟ ಜಾತಿ), ಬಬಿತ ಬೊಮ್ಮರಬೆಟ್ಟು ಹಿರಿಯಡ್ಕ, ವಿಶ್ವನಾಥ ಬೆಳ್ಳಂಪಳ್ಳಿ ಉಡುಪಿ (ಪರಿಶಿಷ್ಠ ಪಂಗಡ

ಜೆರಾಲ್ಡ್ ಪಿಂಟೊ, ಕಲ್ಯಾಣಪುರ, ಚಂದ್ರಮೋಹನ ಪೂಜಾರಿ ಪಾಂಡೇಶ್ವರ ಸಾಸ್ತಾನ, ಮಂಜುನಾಥ್ ಆರ್ ಅರಾಟೆ ಕುಂದಾಪುರ (ಹಿಂದುಳಿದ ವರ್ಗ)

ಜಿಲ್ಲಾ ಪೊಲೀಸ್ ಅಧೀಕ್ಷರು, ಪತ್ರಾಂಕಿತ ಗ್ರೂಪ್ ಎ ಅಧಿಕಾರಿಗಳಾದ ಶೈಲಜಾ ಎಂ ಎನ್ (ಕಾರ್ಯನಿರ್ವಾಹಕ ಅಭಿಯಂತರರು ಪಿ ಆರ್ ಇ ಡಿ ) ಹಾಲಪ್ಪ ಆರ್ ಲಮಾಣಿ ಜಿಲ್ಲಾ ಅಧಿಕಾರಿ ಹಿಂದುಳೀದ ವರ್ಗಗಳ ಕಲ್ಯಾಣ ಇಲಾಖೆ, ಚಂದ್ರ ಶೇಖರ ನಾಯ್ಕ್ ಉಪನಿರ್ದೇಶಕರು ಕೃಷಿ ಇಲಾಖೆ ಸದಸ್ಯರಾಗಿರುತ್ತಾರೆ.
ಉಪನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಸಮಿತಿಯ ಆಹ್ವಾನಿತ ಸದಸ್ಯರಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ಸರ್ಕಾರಿ ಅಭಿಯೋಜಕರು, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕುಂದಾಪುರದ ಸರ್ಕಾರಿ ಅಭಿಯೋಜಕರು, ಐಟಿಡಿಪಿ ಉಡುಪಿ ಯೋಜನಾ ಸಮನ್ವಯನಾಧಿಕಾರಿಗಳು ಆಗಿರುತ್ತಾರೆ.

ಸದರಿ ಸಮಿತಿಯ ಉದ್ದೇಶಗಳು ಈ ಕೆಳಗಿನಂತೆ ಇದ್ದು ಕಾಲಕಾಲಕ್ಕೆ ನಡೆಯುವ ಜಿಲ್ಲಾ ಸಮಿತಿ ಸಭೆಗಳಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿ ಸೂಕ್ತ ಸಲಹೆ ಸಹಕಾರ ನೀಡಬೇಕಾಗಿ ಕೋರಿದೆ.
1. ದೌರ್ಜನ್ಯ ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸುವುದು.
2. ದೌರ್ಜನ್ಯಕ್ಕೆ ಒಳಗಾದವರಿಗೆ ಪರಿಹಾರವನ್ನು ಮತ್ತು ಪುನರ್ವಸತಿ ಸೌಕರ್ಯಗಳನ್ನು ಒದಗಿಸುವುದು.
3. ಕಾಯ್ದೆಯಡಿ ನೋಂದಾಯಿಸಲಾದ ಪ್ರಕರಣಗಳ ವಿಚಾರಣೆ (ಕರ್ನಾಟಕದಲ್ಲಿ ಶಿಕ್ಷೆಯ ಪ್ರಮಾಣ ಹಾಗೂ ತನಿಖೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಪ್ರಾಸಿಕ್ಯೂಷನ್ ನಿಂದ ಸೂಕ್ತ ಸಾಕ್ಷ್ಯಗಳನ್ನು ನ್ಯಾಯಾಲಯಗಳ ಮುಂದೆ ಇಡಲು ವಿಶೇಷ ಗಮನ ನೀಡಬೇಕು)
4. ದೌರ್ಜನ್ಯ ಪೀಡಿತ ಪ್ರದೇಶಗಳನ್ನು ಗುರುತಿಸುವುದು ಮತ್ತು ೪ ಪ್ರದೇಶಗಳಲ್ಲಿ ದೌರ್ಜನ್ಯವನ್ನು ತಡೆಗಟ್ಟುವ ಕ್ರಮಗಳನ್ನು ಸೂಚಿಸುವುದು.
5. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಬಂದ ವರದಿಗಳ ಬಗ್ಗೆ ಪರಿಶೀಲಿಸುವುದು.


Spread the love
Subscribe
Notify of

0 Comments