ಬ್ರಹ್ಮರಕೂಟ್ಟು ಟೋಲ್ ಗೇಟನ್ನು ಎಲ್ಲರೂ ವಿರೋಧಿಸುವವರೇ ಹೊರತು ಸಮರ್ಥಿಸುವವರು ಯಾರೂ ಇಲ್ಲ: ರಮಾನಾಥ ರೈ
ಬಂಟ್ವಾಳ : ಬ್ರಹ್ಮರಕೂಟ್ಟು ವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ಎಲ್ಲರೂ ವಿರೋದಿಸುವವರೇ ಹೊರತು ಸಮರ್ಥಿಸುವವರು ಯಾರೂ ಇಲ್ಲ ಎಂದು ಮಾಜಿ ಸಚಿವ, ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ಆಶ್ರಯದಲ್ಲಿ ನ ಮಂಗಳವಾರ ಬೆಳಿಗ್ಗೆ ಆರಂಭಗೊಂಡ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ಉದ್ಘಾಟಿಸಿ ಮಾತನಾ ಡಿದ ಅವರು, ನೆರೆ ವಿಮೋಚನಾ ರಸ್ತೆಯಲ್ಲಿ ಸುಂಕ ವಸೂಲಿ ಮಾಡುವ ಜಗತ್ತಿನ ಏಕೈಕ ಟೋಲ್ ಗೇಟ್ ಇದ್ದರೆ ಅದು ಬ್ರಹ್ಮರಕೂಟ್ಟು ಟೋಲ್ ಗೇಟ್ ಮಾತ್ರ ಎಂದು ಲೇವಡಿ ಮಾಡಿದರು.
ಇಲ್ಲಿನ ಟೋಲ್ ಗೇಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿನ ಟೋಲ್ ವಸೂಲಾತಿ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆಗಳೂ ಇಲ್ಲ. ಕೇಂದ್ರ ಹೆದ್ದಾರಿ ಇಲಾಖೆಯ ಅಂತರದ ನಿಯಮವೂ ಇಲ್ಲಿ ಪಾಲನೆಯಾಗುತ್ತಿಲ್ಲ. ಸಂಪೂರ್ಣವಾಗಿ ಅನಗತ್ಯ ಟೋಲ್ ಗೇಟ್ ಇದಾಗಿದೆ. ಇಲ್ಲಿನ ಟೋಲ್ ಗೇಟ್ ಯಾವುದೇ ಸುಸೂತ್ರ ಜಾಗದಲ್ಲಿ ಇಲ್ಲದೆ ಇದ್ದು, ಇದು ಕೇವಲ ವಸೂಲಿ ಕೇಂದ್ರವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಕಡೆಯಿಂದ ಮಂಗಳೂರಿಗೆ ತೆರಳುವ ಪ್ರಯಾಣಿಕರು ಎರಡು ಕಡೆ ಟೋಲ್ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದ ರಮಾನಾಥ ರೈ, ಹೆದ್ದಾರಿ ಪ್ರಾಧಿಕಾರದ ದುರ್ನಡತೆ ಹದ್ದು ಮೀರು ತ್ತಿದೆ. ಯಾವುದೇ ವ್ಯವಸ್ಥೆಗಳಿಲ್ಲದೆ ಇರುವುದು ಗೊತ್ತಿದ್ದರೂ, ವಿರೋಧಿ ಹೋರಾಟಗಳು ಹೆಚ್ಚುತ್ತಿದ್ದರೂ ಹೆದ್ದಾರಿ ಇಲಾಖೆ ಇನ್ನೂ ಜನರ ತಾಳ್ಮೆ ಪರೀಕ್ಷಿಸುತ್ತಿದೆ. ನಾವು ಕೂಡಾ ಏಕಾ ಏಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿದಿಲ್ಲ. ಕಾನೂನು ಹಾಗೂ ನಿಯಮಗಳಿಗೆ ಗೌರವ ಕೊಟ್ಟು ಹಂತ ಹಂತವಾಗಿ ಹೋರಾಟ ರೂಪಿಸುತ್ತಿದ್ದು ಹೆದ್ದಾರಿ ಇಲಾಖೆ ಹದ್ದು ಮೀರಿದರೆ ಮುಂದಿನ ದಿನಗಳಲ್ಲಿ ನಮ್ಮ ಹೋರಾಟಗಳು ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ ಮಾತನಾಡಿ, ಬ್ರಹ್ಮರಕೂಟ್ಟು ಟೋಲ್ ಗೇಟ್ ನ ಜನನ ಯಾವಾಗ ಆದರೂ ಪರವಾಗಿಲ್ಲ ಆದರೆ ಯಾವಾಗ ಉಪ್ಪಿನಂಗಡಿ – ವಳಾಲಿನಲ್ಲಿ ಸುಂಕ ವಸೂಲಾತಿ ಆರಂಭ ವಾಗುತ್ತದೋ ಅಂದು ಖಂಡಿತಾ ಬ್ರಹ್ಮರಕೂಟ್ಟು ಟೋಲ್ ಗೇಟ್ ನ ಮರಣ ಸಂಭವಿಸುತ್ತದೆ. ಇದಕ್ಕೆ ಯಾವುದೇ ರೀತಿಯ ಸಂಶಯ ಬೇಡ ಎಂದರು.
ಪಿಯೂಷ್ ಎಲ್ ರೋಡ್ರಿಗಸ್, ಜಯಶೀಲ ಅಡ್ಯಂತಾಯ, ಮೋಹನ್ ಕೋಟ್ಯಾನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪದ್ಮನಾಭ ರೈ, ಲುಕ್ಕಾನ್ ಬಂಟ್ವಾಳ, ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಸುಧಾಕರ ಶೆಣೈ ಖಂಡಿಗ, ಸುರೇಶ್ ಕುಮಾರ್ ನಾವೂರ, ಉಮೇಶ್ ಬೋಳಂತೂರು, ಎ.ಬಿ.ಅಬ್ದುಲ್ವ ಪದ್ಮಶೇಖರ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ ಜೈನ್, ಪದ್ಮನಾಭ ಪೂಜಾರಿ, ದಿವಾಕರ ಪಂಬದಬೆಟ್ಟು, ಐಡಾ ಸುರೇಶ್, ಜಯಂತಿ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಸದಾಶಿವ ಬಂಗೇರ, ಮುಹಮ್ಮದ್ ನಂದಾವರ, ವೆಂಕಪ್ಪ ಪೂಜಾರಿ, ಸಿದ್ದೀಕ್ ಸರವು, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಲವೀನಾ ವಿಲ್ಮಾ ಮೊರಾಸ್, ಇಟ್ಬಾಲ್ ಜೆಟಿಟಿ, ಜೋಸ್ಮಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.













