ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸಹಾಯಧನ: ಅರ್ಜಿ ಆಹ್ವಾನ

Spread the love

ಕ್ರಿಶ್ಚಿಯನ್ ಸಂಸ್ಥೆಗಳಿಗೆ ಸಹಾಯಧನ: ಅರ್ಜಿ ಆಹ್ವಾನ

ಮಂಗಳೂರು: ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ಯೋಜನೆಯಡಿ ಚರ್ಚ್ ದುರಸ್ಥಿ/ನವೀಕರಣ, ಪುನರ್ನಿರ್ಮಾಣ, ಪುನಃಸ್ಥಾಪನೆ, ಉನ್ನತೀಕರಣ ಹಾಗೂ ಚರ್ಚ್ ಆವರಣ ಗೋಡೆ ನಿರ್ಮಾಣ, ಸಮಾಧಿ/ಸ್ಮಶಾನ ಸ್ಥಳಗಳಲ್ಲಿ ಕಾಂಪೌಂಡ್ ಗೋಡೆ ಮತ್ತು ಮೂಲಭೂತ ಸೌಲಭ್ಯಗಳ ನಿರ್ಮಾಣ, ಸಮುದಾಯಭವನ ನಿರ್ಮಾಣ, ಕ್ರಿಶ್ಚಿಯನ್ ಸಮುದಾಯದ ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಸಹಾಯಧನ ಮತ್ತು ಹೆಚ್.ಐ.ವಿ/ ಏಡ್ಸ್ ಪೀಡಿತರು ಹಾಗೂ ದೈಹಿಕ/ಮಾನಸಿಕ ವಿಕಲಚೇತನರಿಗಾಗಿ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಆಶ್ರಯ/ ಆರೈಕೆ ಕೇಂದ್ರಗಳಿಗೆ ಸಹಾಯಧನ ನೀಡುವ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.

ಆನ್ಲೈನ್ ಪೋರ್ಟಲ್ https://www.kccdclonline.karnataka.gov.in/ ಮೂಲಕ ಅರ್ಜಿ ಸಲ್ಲಿಸಿ, ಪ್ರಸ್ತಾವನೆಯ ಮೂಲ ದಾಖಲೆ ಹಾಗೂ ಹೆಚ್ಚುವರಿ ಒಂದು ಪ್ರತಿಯನ್ನು ನಗರದ ಪಾಂಡೇಶ್ವರ ಓಲ್ಡ್ಕೆಂಟ್ ರೋಡ್ನಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಯವರ ಕಛೇರಿ ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನಾ ಆಜಾದ್ ಭವನ ಅಲೆವೂರು ರಸ್ತೆ ಮಣಿಪಾಲ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments