ಕೇಕ್‌ ಗಳಲ್ಲಿ ಹಾನಿಕಾರಕ ಬಣ್ಣಗಳ ಬಳಕೆ ತಡೆಗೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರಿಶೀಲನೆ

Spread the love

ಕೇಕ್‌ ಗಳಲ್ಲಿ ಹಾನಿಕಾರಕ ಬಣ್ಣಗಳ ಬಳಕೆ ತಡೆಗೆ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಪರಿಶೀಲನೆ

ಮಂಗಳೂರು: ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ತಂಡವು ಕೇಕ್ ಮತ್ತು ಐಸ್‌ಕ್ರೀಂ ತಯಾರಿಕೆ ಹಾಗೂ ಮಾರಾಟ ಘಟಕಗಳಲ್ಲಿ ಪರಿಶೀಲನೆ ನಡೆಸಿತು.

ಕ್ಲೌಡ್ ಕಿಚನ್ ಮತ್ತು ಸೆಂಟ್ರಲ್ ಕೇಕ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳಿಂದ ಕೇಕ್ ಹಾಗೂ ಐಸ್‌ಕ್ರೀಂಗಳನ್ನು ಪಡೆದು ಮಾರಾಟ ಮಾಡುತ್ತಿರುವ ‘ರಿಬ್ಬನ್ಸ್ ಅಂಡ್ ಬಲೂನ್ಸ್’ ಮತ್ತು ‘ಹೈವ್’ ಫ್ರಾಂಚೈಸಿ ಘಟಕಗಳಿಗೆ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದರು.

ಸುರತ್ಕಲ್ ವ್ಯಾಪ್ತಿಯಲ್ಲಿ ವಿಶೇಷ ಪರಿಶೀಲನೆ ನಡೆಸಿದ ತಂಡವು ಕೇಕ್‌ಗಳ ತಯಾರಿಕೆಯಲ್ಲಿ ಬಳಸಲಾಗುತ್ತಿರುವ ಬಣ್ಣಗಳ ಗುಣಮಟ್ಟವನ್ನು ಪರೀಕ್ಷಿಸಲು ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿತು.

ಕೇಕ್‌ಗಳು ಆಕರ್ಷಕವಾಗಿ ಕಾಣುವಂತೆ ಮಾಡಲು ಆರೋಗ್ಯಕ್ಕೆ ಹಾನಿಕಾರಕವಾದ ಬಣ್ಣಗಳನ್ನು ಬಳಸಬಾರದು ಎಂದು ಅಧಿಕಾರಿಗಳು ಘಟಕಗಳ ನಿರ್ವಾಹಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಅಲ್ಲದೆ, ಹಬ್ಬದ ಸಂದರ್ಭಗಳಲ್ಲಿ ತಯಾರಿಸುವ ಸಿಹಿತಿಂಡಿಗಳಲ್ಲಿಯೂ ಅನಗತ್ಯ ಹಾಗೂ ಹಾನಿಕಾರಕ ಬಣ್ಣಗಳನ್ನು ಬಳಸದೆ, ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸಿ ಗುಣಮಟ್ಟದ ಮತ್ತು ಸ್ವಚ್ಛತೆಯೊಂದಿಗೆ ತಯಾರಿಸುವಂತೆ ಸೂಚಿಸಲಾಯಿತು.


Spread the love
Subscribe
Notify of

0 Comments