ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ಸರಕಾರ ಬದ್ಧ: ಐವನ್ ಡಿಸೋಜಾ
ಮಂಗಳೂರು: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ 2022ರಲ್ಲಿ ಜಾರಿಗೆ ತರಲಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯಲು ಪ್ರಸಕ್ತ ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಲಾಲ್ಬಾಗ್ನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2022ರಲ್ಲಿ ಈ ಕಾಯ್ದೆ ಜಾರಿಗೆ ತಂದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಈ ಕಾಯ್ದೆ ಹಿಂಪಡೆಯುವುದಾಗಿ ಭರವಸೆ ನೀಡಿದ್ದರು. ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ಗೆ ಸಂಖ್ಯಾಬಲ ಇಲ್ಲದ ಕಾರಣಕ್ಕೆ ಮೂರು ವರ್ಷ ಕಳೆದರೂ ಇದು ಸಾಧ್ಯವಾಗಿರಲಿಲ್ಲ. ಇದೀಗ ಸಂಖ್ಯಾಬಲ ಹೊಂದಿರುವುದರಿಂದ ಕಾಯ್ದೆ ವಾಪಸ್ ಪಡೆಯಲು ಸರ್ಕಾರ ಬದ್ಧವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭರವಸೆ ನೀಡಿದ್ದಾರೆ ಎಂದರು.
ಡಿಸೆಂಬರ್ 2ರಿಂದ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಈ ಕಾಯ್ದೆ ಹಿಂಪಡೆಯುವ ವಿಶ್ವಾಸವಿದೆ. ಅಲ್ಲದೆ, ಈ ಕಾಯ್ದೆಯಡಿ ಈವರೆಗೆ ರಾಜ್ಯದಲ್ಲಿ ದಾಖಲಾಗಿರುವ 46 ಪ್ರಕರಣಗಳನ್ನು ರದ್ದುಗೊಳಿಸುವಂತೆ ಹೋರಾಟ ಗಾರರು ಒತ್ತಾಯಿಸಿದ್ದಾರೆ. ಯಾರೂ ಒತ್ತಾಯಪೂರ್ವಕವಾಗಿ ಮತಾಂತರ ಮಾಡುವುದಿಲ್ಲ. ಒತ್ತಾಯದ ಮತಾಂತರ ಪ್ರಕರಣಗಳಿದ್ದರೆ ಅವುಗಳನ್ನು ರದ್ದುಗೊಳಿಸಲು ಸಾಧ್ಯವೂ ಇಲ್ಲ. ಅಂತರ ಧರ್ಮೀಯ ವಿವಾಹ ವಾದವರಿಗೆ ಈ ಕಾಯ್ದೆಯಿಂದ ಸಮಸ್ಯೆಯಾಗುತ್ತದೆ. ಹೀಗಾಗಿ, ಇದನ್ನು ಹಿಂಪಡೆಯಬೇಕು ಎಂದು ಅವರು ಹೇಳಿದರು.
ಕರ್ನಾಟಕ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರತ್ಯೇಕ ಉಪವರ್ಗ ಹಾಗೂ ಶೇ 2 ಮೀಸಲಾತಿ ಒದಗಿಸಬೇಕು. ಕ್ರಿಶ್ಚಿಯನ್ ಸಮುದಾಯವನ್ನು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವೆಂದು ನಿರಂತರವಾಗಿ ಪರಿಗಣಿಸಲಾಗಿದೆ. ಕ್ರಿಶ್ಚಿಯನ್ ಸಮುದಾಯವನ್ನು ಪ್ರವರ್ಗ 3(ಬಿ) ಯಲ್ಲಿ ಸೇರಿಸಿದ್ದು, ಶೇ 5ರ ಮೀಸಲಾತಿ ಅಡಿಯಲ್ಲಿ ಇತರರೊಂದಿಗೆ ಹಂಚಿಕೊಳ್ಳಬೇಕಾಗಿದೆ. ಪ್ರವರ್ಗ 3(ಬಿ) ಯಲ್ಲಿ ಸುಮಾರು 18 ಸಮುದಾಯಗಳು ಇವೆ. ಈ ವರ್ಗೀಕರಣದಲ್ಲಿ ಕ್ರಿಶ್ಚಿಯನ್ನರು, ದಲಿತ, ಹಿಂದುಳಿದ ವರ್ಗ, ಗ್ರಾಮೀಣ ಹಿನ್ನೆಲೆಯಿಂದ ಬಂದವರು ಅವಕಾಶ ವಂಚಿತರಾಗುತ್ತಾರೆ. ಹೀಗಾಗಿ, ಪ್ರವರ್ಗ ಬಿ (3)ರಿಂದ ಕ್ರಿಶ್ಚಿಯನ್ನರನ್ನು ಪ್ರತ್ಯೇಕಿಸಿ, ವಿಶಿಷ್ಟ
ಸುದ್ದಿಗೋಷ್ಠಿಯಲ್ಲಿ ಭಾಸ್ಕರ್ ರಾವ್, ನಾಗೇಂದ್ರ ಕುಮಾರ್, ಎನ್.ಪಿ. ಮನುರಾಜ್, ಸತೀಶ್ ಪೆಂಗಲ್, ಹರ್ಬಟ್್ರ ಡಿಸೋಜಾ, ಇಮಾನ್, ಮುಹಮ್ಮದ್ ನವಾಝ್, ಮನೀಶ್ ಬೋಳಾರ ಮೊದಲಾದವರು ಉಪಸ್ಥಿತರಿದ್ದರು.













