ಸೆಪ್ಟಂಬರ್ 6 ರಂದು ಕೇರಳ ಸಮಾಜಂ (ರಿ) ವತಿಯಿಂದ ದ್ವೀತಿಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ
ಉಡುಪಿ: ಕೇರಳ ಸಮಾಜಂ ಉಡುಪಿ (ರಿ) ವತಿಯಿಂದ ದ್ವಿತೀಯ ವರ್ಷದ ಅದ್ದೂರಿ ಓಣಂ ಸಂಭ್ರಮಾಚರಣೆ ಸೆಪ್ಬಂಬರ್ 6 ಭಾನುವಾರದಂದು ಅಂಬಾಗಿಲು ಬಳಿಯ ಅಮೃತ್ ಗಾರ್ಡನ್ ಸಭಾಭವನದಲ್ಲಿ ನಡೆಯಲಿದೆ ಎಂದು ಕೇರಳ ಸಮಾಜಂ ಉಡುಪಿ ಇದರ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ತಿಳಿಸಿದ್ದಾರೆ.
ಕಳೆದ ಬಾರಿ ಮೊದಲ ವರ್ಷದ ಓಣಂ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಅತ್ಯದ್ಭುತ ಬೆಂಬಲ ಸಿಗುವುದರ ಮೂಲಕ ಯಶಸ್ವಿಯಾಗಿ ನೆರವೇರಿತ್ತು.ಅದೇ ಯಶಸ್ವಿನ ಮುಂದುವರೆದ ಭಾಗವಾಗಿ ಈ ಬಾರಿ ಅದ್ದೂರಿಯಾಗಿ ಓಣಂ ಸಂಭ್ರಮಾಚರಣೆಯನ್ನು ಅಚರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ನೆರವೇರಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿಗಳಾದ ಸ್ವರೂಪ ಟಿ ಕೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಹರಿರಾಮ್ ಶಂಕರ್ ,ಮಣಿಪಾಲದ ಕೆ ಎಂಸಿ ಅಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞರಾದ ಡಾ.ಶ್ಯಾಮ್ ಕೆ ಅಶೋಕ್ ,ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಟ್ರಸ್ಟಿಗಳಾದ ಅಭಿಲಾಶ್ ಪಿ ವಿ ,ಕೇರಳ ಸಮಾಜಂ ಮಂಗಳೂರು ಅಧ್ಯಕ್ಷರಾದ ಟಿ ಕೆ ರಾಜನ್ ,ಪ್ರಸಿದ್ದ ಮಾಲಯಾಳಂ ಸಿನಿಮಾ ನಟಿಯರಾದ ಸುಚಿತ್ರ ನಾಯರ್ ,ನೀನಾ ಕುರುಪ್, ಪ್ರಸಿದ್ದ ಬಾಲ ಕಲಾವಿದೆ ,ಗಾಯಕಿ ರಾನಿಯ ರಫೀಕ್ ,ಭಾಗವಹಿಸಲಿದ್ದು ಕಾರ್ಯಕ್ರಮ ಮೆರಗು ಹೆಚ್ಚಿಸಲಿದ್ದಾರೆ.
ಈ ಅದ್ದೂರಿ ಕಾರ್ಯಕ್ರಮದಲ್ಲಿ ಪೂಕಳಂ ಸ್ಪರ್ಧೆ , ಮಕ್ಕಳಿಗಾಗಿ ಓಣಂ ಆಟ ಗಳು ,ಕೇರಳ ಸಮಾಜಂ ಸದಸ್ಯರುಗಳಿಂದ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ,ಕಳರಿ ಪಾಯಟ್ಟು ಪ್ರದರ್ಶನ , ಜೊತೆಗೆ ಮಧ್ಯಾಹ್ನ ಕೇರಳದ ವಿಶೇಷ “ಓಣಂ ಸಧ್ಯ” ಭೋಜನ ಕೂಟ ನಡೆಯಲಿದೆ.
ಕೇರಳದ ಸಂಪ್ರದಾಯಿಕ ಓಣಂ ಅಚರಣೆ , ಕಲೆ ,ಸಾಂಸ್ಕೃತಿ ಅಲ್ಲಿನ ಆಹಾರ ಪದ್ದತಿಗಳನ್ನು , ಕರಾವಳಿಯ ಜನರಿಗೆ ಅರಿವು ಮೂಡಿಸುವ ಉದ್ದೇಶವೂ ಈ ಕಾರ್ಯಕಮದ ಪ್ರಮುಖ ಉದ್ದೇಶವಾಗಿದೆ ಎಂದು ಅಧ್ಯಕ್ಷರಾದ ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













