ಫಾದರ್ ಮುಲ್ಲರ್ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನಲ್ಲಿ ಹೊಸ ಬ್ಯಾಚ್‌ಗಳ ಕೋರ್ಸ್ ಉದ್ಘಾಟನೆ
ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆಯಲ್ಲಿ ಬಿ.ಎಸ್ಸಿ. ನರ್ಸಿಂಗ್‌ನ 5ನೇ ಬ್ಯಾಚ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ನ 3ನೇ ಬ್ಯಾಚ್‌ಗಳ ಕೋರ್ಸ್ ಉದ್ಘಾಟನಾ ಸಮಾರಂಭವು 2026ರ ಅಕ್ಟೋಬರ್ 9 ರಂದು ನೆರವೇರಿತು.
![]()
ಕಾಲೇಜು ಬ್ಯಾಂಡ್‌ನ ನೇತೃತ್ವದಲ್ಲಿ ನಡೆದ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯವನ್ನು ಪ್ರಸ್ತುತಪಡಿಸಿದರು. ಸಂಸ್ಥೆಯ ಸ್ಥಾಪಕರಾದ ವಂ. ಫಾ. ಆಗಸ್ಟಸ್ ಮುಲ್ಲರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು.
ಡಾ. ರೀನಾ ವಿಲ್ಮಾ ಫ್ರಾಂಕ್, ಪ್ರಾಂಶುಪಾಲರು, ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು, ತುಂಬೆ (FMNCT), ಅವರು ಸಮಾರಂಭಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಜ್ಞಾನ ಮತ್ತು ವಿವೇಕದ ಬೆಳಕನ್ನು ಸಂಕೇತಿಸುವ ದೀಪಪ್ರಜ್ವಲನೆಯೊಂದಿಗೆ ಸಮಾರಂಭವು ಆರಂಭಗೊಂಡಿತು.
ಸಮಾರಂಭದ ಅಧ್ಯಕ್ಷತೆಯನ್ನು ವಂದನೀಯ ಗುರುಗಳಾದ ಫೌಸ್ಟಿನ್ ಲೂಕಸ್ ಲೋಬೊ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಷನ್ಸ್ (FMCI), ವಹಿಸಿದ್ದರು. ಕೋರ್ಸ್‌ಗಳ ಅಧಿಕೃತ ಉದ್ಘಾಟನೆಯನ್ನು ಕೋಶದಿಂದ ಹೊರಬರುತ್ತಿರುವ ಚಿಟ್ಟೆಯ ಅನಾವರಣದ ಮೂಲಕ ನೆರವೇರಿಸಲಾಯಿತು. ಈ ಪ್ರತೀಕಾತ್ಮಕ ಪ್ರಸ್ತುತಿ ಪೋಷಣೆ, ಪರಿವರ್ತನೆ ಮತ್ತು ಬೆಳವಣಿಗೆಯನ್ನು ಪ್ರತಿನಿಧಿಸುವುದರ ಜೊತೆಗೆ, ವಿದ್ಯಾರ್ಥಿಗಳು ಮೂಲಭೂತ ಕಲಿಕೆಯಿಂದ ಸಮರ್ಥ ಆರೋಗ್ಯ ವೃತ್ತಿಪರರಾಗುವವರೆಗಿನ ಪಯಣವನ್ನು ಸಂಕೇತಿಸಿತು.
![]()
ಉದ್ಘಾಟನಾ ಕಾರ್ಯಕ್ರಮವನ್ನು ವಂದನೀಯ ಗುರುಗಳಾದ ಫೌಸ್ಟಿನ್ ಲೂಕಸ್ ಲೋಬೊ, ನಿರ್ದೇಶಕರು, FMCI; ವಂದನೀಯ ಗುರುಗಳಾದ ರೋಹನ್ ಮೈಕೆಲ್ ಡಯಾಸ್, ಆಡಳಿತಾಧಿಕಾರಿ, FMNCT & FMAHST; ಡಾ. ರೀನಾ ವಿಲ್ಮಾ ಫ್ರಾಂಕ್, ಪ್ರಾಂಶುಪಾಲರು, FMNCT; ಡಾ. ಪೌಲಿನ್ ಆನಂದ್, ಪ್ರಾಂಶುಪಾಲರು, FMAHST; ಪ್ರೊಫೆಸರ್ ಜಾನೆಟ್ ಸಿಕ್ವೇರಾ, ಉಪ ಪ್ರಾಂಶುಪಾಲರು, FMNCT; FMNCTಯ ಕೋರ್ಸ್ ಸಂಯೋಜಕರಾದ ಶ್ರೀಮತಿ ಸುಷ್ಮಾ ರೋಡ್ರಿಗಸ್; FMAHSTಯ ಕೋರ್ಸ್ ಸಂಯೋಜಕರಾದ ಶ್ರೀ ಹೇಮಂತ್ ಕೆ., ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ನೆರವೇರಿಸಿದರು.
ಸಂಸ್ಥೆಯ ಪರಿಚಯವನ್ನು ಪ್ರೊಫೆಸರ್ ಜಾನೆಟ್ ಸಿಕ್ವೇರಾ ಅವರು ಪ್ರಸ್ತುತಪಡಿಸಿದರು. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಂದನೀಯ ಗುರುಗಳಾದ ಫೌಸ್ಟಿನ್ ಲೂಕಸ್ ಲೋಬೊ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸಮರ್ಪಣೆ, ಕರುಣೆ, ಶಿಸ್ತು ಹಾಗೂ ವೃತ್ತಿಪರ ಜವಾಬ್ದಾರಿಯ ಮಹತ್ವವನ್ನು ಅವರು ಒತ್ತಿಹೇಳಿದರು.
“ವಿದ್ಯಾರ್ಥಿಗಳು ಪ್ರತಿಯೊಂದು ಅವಕಾಶವನ್ನೂ ಸದುಪಯೋಗಪಡಿಸಿಕೊಂಡು, ಶಿಸ್ತು, ಸಮರ್ಪಣೆ ಹಾಗೂ ನಿರಂತರ ಅಭ್ಯಾಸದ ಮೂಲಕ ಸಮರ್ಥ ಆರೋಗ್ಯ ವೃತ್ತಿಪರರಾಗಬೇಕು ಎಂದು ಕರೆ ನೀಡಿದರು. ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಿ, ಬೋಧಕ ವರ್ಗದೊಂದಿಗೆ ಸಹಕರಿಸುವ ಮೂಲಕ ಅವರ ಉಜ್ವಲ ಭವಿಷ್ಯಕ್ಕೆ ಬೆಂಬಲ ನೀಡಬೇಕು ಎಂದು ಅವರು ತಿಳಿಸಿದರು.”
![]()
ಔಪಚಾರಿಕ ಕಾರ್ಯಕ್ರಮವು ಡಾ. ಪೌಲಿನ್ ಆನಂದ್, ಪ್ರಾಂಶುಪಾಲರು, FMAHST ಅವರು ನೆರವೇರಿಸಿ ಕೊಟ್ಟರು, ನಂತರ ಸಂಸ್ಥೆಯ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಉದ್ಘಾಟನಾ ಸಮಾರಂಭದ ನಂತರ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗಾಗಿ ಪೋಷಕ–ಶಿಕ್ಷಕ–ವಿದ್ಯಾರ್ಥಿ ಪರಿಚಯಾತ್ಮಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮೂಲಕ ಅವರಿಗೆ ಶೈಕ್ಷಣಿಕ ವಾತಾವರಣ, ಸಂಸ್ಥೆಯ ನಿರೀಕ್ಷೆಗಳು ಹಾಗೂ ಅವರ ಶೈಕ್ಷಣಿಕ ಪಯಣದ ವಿವಿಧ ಅಂಶಗಳ ಕುರಿತು ಪರಿಚಯ ನೀಡಲಾಯಿತು. ಸಮರ್ಥ, ಸಹಾನುಭೂತಿಯುಳ್ಳ ಮತ್ತು ಜವಾಬ್ದಾರಿಯುತ ಆರೋಗ್ಯ ವೃತ್ತಿಪರರನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಬೋಧಕ ಸಿಬ್ಬಂದಿಯ ನಡುವಿನ ಸಹಕಾರದ ಮಹತ್ವವನ್ನೂ ಈ ಕಾರ್ಯಕ್ರಮದಲ್ಲಿ ಒತ್ತಿಹೇಳಲಾಯಿತು.
ಈ ಉದ್ಘಾಟನಾ ಸಮಾರಂಭವು ಹೊಸ ವಿದ್ಯಾರ್ಥಿಗಳು ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಹಾಗೂ ಅದರ ಅಲೈಡ್ ಹೆಲ್ತ್ ಸೈನ್ಸಸ್ ತುಂಬೆ, ಕಾರ್ಯಕ್ರಮಗಳಲ್ಲಿ ತಮ್ಮ ವೃತ್ತಿಪರ ಶಿಕ್ಷಣವನ್ನು ಆರಂಭಿಸುವ ಮಹತ್ವದ ಪಯಣದ ಶುಭಾರಂಭಕ್ಕೆ ನಾಂದಿ ಹಾಡಿತು.











