ಪಟ್ಲ ಯು.ಎಸ್. ನಾಯಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Spread the love

ಪಟ್ಲ ಯು.ಎಸ್. ನಾಯಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಪಟ್ಲ: ಯು.ಎಸ್. ನಾಯಕ್ ಪ್ರೌಢ ಶಾಲೆ, ಪಟ್ಲದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ವಾರಣಾಸಿ ಯೋಗ ಕೇಂದ್ರದ ಯೋಗಗುರು ಶ್ರೀ ಪ್ರಕಾಶಾನಂದ ಗುರುಜಿ ಭಾಗವಹಿಸಿ, “ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗವು ದಿವ್ಯೌಷಧವಾಗಬಲ್ಲದು” ಎಂದು ಯೋಗದ ಮಹತ್ವವನ್ನು ವಿವರಿಸಿದರು. ಬಳಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸುಮಾರು ಒಂದು ಗಂಟೆಗಳ ಕಾಲ ವಿವಿಧ ಯೋಗಾಸನಗಳು ಮತ್ತು ಯೋಗಾಭ್ಯಾಸಗಳನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ರೂರಲ್ ಎಜುಕೇಶನ್ ಸೊಸೈಟಿ (ರಿ.), ಪಟ್ಲ ಇದರ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಆಡಳಿತ ಮಂಡಳಿ ಸದಸ್ಯರಾದ ಡಾ. ಕೆ. ನಾರಾಯಣ ಶೆಣೈ ಹಾಗೂ ಜಯರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸಮೂಹ ವಿದ್ಯಾಸಂಸ್ಥೆಗಳ ಗುರುಜಿ ಮಾತಾಜಿಯವರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಶಾಂತಪ್ಪ ಮೂಲಂಗಿ ಎಲ್ಲರನ್ನು ಸ್ವಾಗತಿಸಿ, ಯೋಗ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಯೋಗಗುರು ಶ್ರೀ ಪ್ರಕಾಶಾನಂದ ಗುರುಜಿಯವರಿಗೆ ಗುರುಕಾಣಿಕೆ ನೀಡಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.


Spread the love
Subscribe
Notify of

0 Comments