ಉದ್ಯೋಗವಕಾಶ: ಅ.31ರಂದು ನೇರ ಸಂದರ್ಶನ
ಮಂಗಳೂರು: ಮಂಗಳೂರು ಫೋರ್ಸ್ ವತಿಯಿಂದ ಪಂಜಿಮೊಗರು, ಬೈಕಂಪಾಡಿ, ಉಡುಪಿ, ಕಾರ್ಕಳ, ಕುಮಟಾ ಹಾಗೂ ಶಿವಮೊಗ್ಗದಲ್ಲಿ ಖಾಲಿ ಇರುವ ಸರ್ವಿಸ್ ಫ್ಲೋರ್ ಇನ್ಚಾರ್ಜ್- ಬೈಕಂಪಾಡಿ, ಸೇಲ್ಸ್ ಮ್ಯಾನೇಜರ್-ಇಲೆಕ್ಟ್ರಿಕ್ 3 ವೀಲರ್, ಪಾಟ್ರ್ಸ್, ಬಿಲ್ಲಿಂಗ್ ಅಸಿಸ್ಟೆಂಟ್-ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಸರ್ವಿಸ್ ಅಡ್ವೈಸರ್- ಜನರಲ್ಬಿಪಿ- ಬೈಕಂಪಾಡಿ, ಸಿಆರಿ ಸರ್ವಿಸ್ ಸೆಕ್ಷನ್(ಪುರುಷ/ಮಹಿಳೆ)-ಉಡುಪಿ, ಅಟೋಮೊಬೈಲ್ ಟೆಕ್ನಿಶಿಯನ್, ಅಟೋಮೊಬೈಲ್ ಇಲೆಕ್ಟ್ರಿಷಿಯನ್, ವೆಹಿಕಲ್ ಪೇಂಟರ್, ಟಿಂಕರ್, 1 ಟ್ರೈನೀ ಟೆಕ್ನಿಶಿಯನ್ ಆಂಡ್ ಇಲೆಕ್ಟ್ರಿಷಿಯನ್, ವೆಹಿಕಲ್ ವಾಷರ್ಸ್- ಉಡುಪಿ ಹುದ್ದೆಗಳಿಗೆ ನೇರ ಸಂದರ್ಶನವನ್ನು ಅಕ್ಟೋಬರ್ 31 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಐ.ಟಿ.ಐ ಹಾಗೂ ಡಿಪ್ಲೋಮ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.













