ಜೋಕಟ್ಟೆ | ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಮನೆಗೆ ಹಾನಿ; ಓರ್ವನಿಗೆ ಗಾಯ

Spread the love

ಜೋಕಟ್ಟೆ | ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ: ಮನೆಗೆ ಹಾನಿ; ಓರ್ವನಿಗೆ ಗಾಯ

ಸುರತ್ಕಲ್: ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡ ಬೆಂಕಿಯಿಂದ ಮನೆಯೊಂದು ಹಾನಿಗೀಡಾಗಿದ್ದು, ಓರ್ವನಿಗೆ ಸುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ತಡರಾತ್ರಿ ಜೋಕಟ್ಟೆಯಲ್ಲಿ ನಡೆದಿರುವುದು ವರದಿಯಾಗಿದೆ.

ದಿ.ಇಜ್ಜಾಕ ಎಂಬವರ ಮನೆಯಲ್ಲಿ ಈ ಅವಘಡ ಸಂಭವಿಸಿದ್ದು, ಅವರ ಕಿರಿಯ ಪುತ್ರ ಜಾಬಿರ್ ಎಂಬವರಿಗೆ ಸುಟ್ಟ ಗಾಯಗಳಾಗಿವೆ., ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶುಕ್ರವಾರ ತಡರಾತ್ರಿ ಮನೆಯಲ್ಲಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಡೈನಿಂಗ್ ಹಾಲ್, ಅಡುಗೆ ಮನೆ, ಒಂದು ಮಲಗುವ ಕೋಣೆ, ಚಾವಡಿ ಸಂಪೂರ್ಣ ಹಾನಿಗೀಡಾಗಿದೆ. ಅಲ್ಲದೇ, ಮನೆಯಲ್ಲಿದ್ದ ಗೃಹೋಪಯೋಗಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಘಟನೆ ನಡೆದಾಗ ಮನೆಯಲ್ಲಿ ಜಾಬಿರ್, ಅವರ ತಾಯಿ, ಅತ್ತಿಗೆ ಮತ್ತು ಅಣ್ಣನ ನಾಲ್ವರು ಮಕ್ಕಳು ಸೇರಿ ಒಟ್ಟು 7 ಮಂದಿ ಮಲಗಿದ್ದರು. ಈ ಪೈಕಿ ಜಾಬಿರ್ ಮನೆಯ ಛಾವಡಿಯಲ್ಲಿ ಮಲಗಿದ್ದ ಕಾರಣ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಮನೆಮಂದಿ ಮನೆಯೆ ಬೇರೆ ಕೋಣೆಗಳಲ್ಲಿ ಮಲಗಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


Spread the love
Subscribe
Notify of

0 Comments