ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯ ವ್ಹಾಳೊ-18’ ಕೊಂಕಣಿ ಕವಿಗೋಷ್ಠಿ

Spread the love

ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯ ವ್ಹಾಳೊ-18’ ಕೊಂಕಣಿ ಕವಿಗೋಷ್ಠಿ

ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕಾವ್ಯ ವ್ಹಾಳೊ-18’ ಕೊಂಕಣಿ ಕವಿಗೋಷ್ಠಿಯನ್ನು ಸೆ.5ರಂದು ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಅಲ್ವಾರಿಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಆಗಮಿಸಿದವರನ್ನು ಸ್ವಾಗತಿಸಿದರು. ಪ್ರತಿಯೊಬ್ಬ ಕವಿಯೂ ಒಂದು ರೀತಿಯಲ್ಲಿ ಶಿಕ್ಷಕನಿದ್ದಂತೆ ಎಂದು ಅವರು ಅಭಿಪ್ರಾಯಪಟ್ಟರು.

“ಕವಿಯೊಬ್ಬನು ಕವನಕ್ಕೆ ಅಗತ್ಯವಿರುವ ವಿಚಾರಗಳನ್ನು ಅಚ್ಚುಕಟ್ಟಾಗಿ ರೂಪಿಸಿ, ಅದಕ್ಕೆ ಸೂಕ್ತವಾದ ಸ್ವರೂಪ ನೀಡುವುದು ಶಿಕ್ಷಕರ ಕಾರ್ಯಕ್ಕಿಂತಲೂ ಕಡಿಮೆಯಲ್ಲ,” ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಖ್ಯಾತ ಕೊಂಕಣಿ ನಟ, ಗಾಯಕ ಹಾಗೂ ಸಾಮಾಜಿಕ ಕಾರ್ಯಕರ್ತ ಎಂ. ಮುರಳೀಧರ ಕಾಮತ್ ಅವರು ಸಮಯದ ಮಹತ್ವವನ್ನು ಒತ್ತಿ ಹೇಳಿದರು.

ನಾವು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿಯೊಂದು ಕ್ಷಣವೂ ನಮ್ಮ ಪ್ರಗತಿಗೆ ಅಥವಾ ಅವನತಿಗೆ ಕಾರಣವಾಗಬಹುದು. ಹೀಗಾಗಿ ಸಮಯವೇ ನಮ್ಮ ಅತ್ಯಂತ ಆಪ್ತ ಸ್ನೇಹಿತ,” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಅಕಾಡೆಮಿಯಿಂದ ಸನ್ಮಾನಿಸಲ್ಪಟ್ಟ ಹಿರಿಯ ಕೊಂಕಣಿ ಹೋರಾಟಗಾರ ಜೆರಾಲ್ಡ್ ರೋಡ್ರಿಗಸ್ ಅವರು ಕೃತಜ್ಞತೆ ಸಲ್ಲಿಸಿದರು.
“ತೆರೆಮರೆಯಲ್ಲಿ ಕೊಂಕಣಿಗಾಗಿ ಕೆಲಸ ಮಾಡಿದ ಕಾರ್ಯಕರ್ತನಾಗಿ ಅಕಾಡೆಮಿಯಿಂದ ಗುರುತಿಸಿ ಗೌರವಿಸಿರುವುದು ನನಗೆ ಪದ್ಮವಿಭೂಷಣ ಪ್ರಶಸ್ತಿ ದೊರೆತಷ್ಟೇ ಹೆಮ್ಮೆ ತಂದಿದೆ. ನನ್ನ ಕಾರ್ಯವನ್ನು ಗುರುತಿಸಿ ಗೌರವಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರಿಗೆ ಧನ್ಯವಾದಗಳು,” ಎಂದು ಅವರು ಹೇಳಿದರು.

ಖ್ಯಾತ ಕವಯಿತ್ರಿ ತಾರಾ ಲವೀನಾ ಫೆರ್ನಾಂಡಿಸ್ (ಲವಿ ಗಂಜಿಮಠ) ಅವರು ಕವಿಗೋಷ್ಠಿಯನ್ನು ನಿರ್ವಹಿಸಿ, ಕವಿಗಳನ್ನು ಹಾಗೂ ಅವರ ಕೃತಿಗಳನ್ನು ಪರಿಚಯಿಸಿದರು.

ಕವಿಗಳಾದ ವಲೇರಿಯನ್ ಸಿಕ್ವೇರಾ (ವಲ್ಲಿ ಬೋಳ), ಶನನ್ ರೀವ್ ಕ್ರಾಸ್ತಾ, ಕೃತಿಕಾ ಕಾಮತ್, ಜೆನಿಷಾ ಶೆರಿಲ್ ರೋಡ್ರಿಗಸ್, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ವೈಲೆಟ್ ಜೆ. ಪಿರೇರಾ, ಅಲೋಮಾ ಲೋಬೊ ಕಾಟೀಲ್, ಗಾಡ್ವಿನ್ ಪಿಂಟೊ, ಕಾಂತಾವರ ಶಿವಾನಂದ ಶೆಣೈ ಹಾಗೂ ಪ್ರೀತಮ್ ಮಿಜಾರ್ ಅವರು ತಮ್ಮ ಕವನಗಳನ್ನು ವಾಚಿಸಿದರು.

ಅಕಾಡೆಮಿ ಸದಸ್ಯ ರೊನಾಲ್ಡ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸದಸ್ಯ ಸಮರ್ಥ ಭಟ್ ಉಪಸ್ಥಿತರಿದ್ದರು.

YouTube player

Spread the love
Subscribe
Notify of

0 Comments