ಕುಂದಾಪುರ ಪುರಸಭೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಕೆ. ವಿಕಾಸ್ ಹೆಗ್ಡೆ

Spread the love

ಕುಂದಾಪುರ ಪುರಸಭೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ: ಕೆ. ವಿಕಾಸ್ ಹೆಗ್ಡೆ

ಕುಂದಾಪುರ ಪುರಸಭೆಯಲ್ಲಿ ಕಳೆದ ಐದು ದಿನಗಳಿಂದ ಕುಡಿಯುವ ನೀರು ಸರಬರಾಜಾಗದೆ ಜನ ತೀವ್ರ ತೊಂದರೆ ಅನುಭವಿಸುತ್ತಿದ್ದರೆ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕಾದ ಕುಂದಾಪುರ ಪುರಸಭೆ ಮಾತ್ರ ಗಾಡ ನಿದ್ರೆಗೆ ಜಾರಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಸಭೆಗಳಲ್ಲಿ ಚುನಾಯಿತ ಜನಪ್ರತಿನಿದಿನಗಳು ಇಲ್ಲದೆ ಇರುವ ಕಾರಣ ಪುರಸಭಾ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಕುಂದಾಪುರ ಪುರಸಭೆಯಲ್ಲಿ ಕಳೆದ ಐದು ದಿನಗಳಿಂದ ಕುಡಿಯುವ ನೀರು ಸರಬರಾಜಾಗದೆ ಜನ ಸಮಸ್ಯೆಗೆ ಸಿಲುಕಿದ್ದರೂ ಕೂಡ ಇದನ್ನು ಪರಿಹರಿಸಬೇಕಾದ ಪುರಸಭೆ ಅಧಿಕಾರಿಗಳು ಬೇರೆ ಬೇರೆ ಸಬೂಬು ಹೇಳಿ ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಬಿಟ್ಟರೆ ಇಲ್ಲಿಯ ತನಕ ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.

ಈ ಭಾರಿ ಮಳೆಗಾಲ ಕೈಕೊಟ್ಟ ಕಾರಣ ಹೆಚ್ಚಿನ ಬಾವಿಗಳಲ್ಲಿ ಈಗಾಗಲೇ ನೀರಿನ ಕೊರತೆ ಏರ್ಪಟ್ಟಿದೆ. ಕುಂದಾಪುರ ಪುರಸಭೆಯ ನೀರನ್ನು ನಂಬಿರುವ ಗ್ರಾಮ ಪಂಚಾಯತುಗಳು ಕೂಡ ನೀರಿನ ಸರಬರಾಜು ವ್ಯತ್ಯಯದಿಂದ ಸಮಸ್ಯೆಗೆ ಈಡಾಗಿವೆ. ಕುಂದಾಪುರ ಪುರಸಭೆಯ ಆಡಳಿತಾಧಿಕಾರಿಯಾಗಿರುವ ಕುಂದಾಪುರ ಸಹಾಯಕ ಆಯುಕ್ತರು ಹಾಗೂ ಕುಂದಾಪುರ ಶಾಸಕರು ಆದಷ್ಟು ಬೇಗ ನೀರಿನ ಸಮಸ್ಯೆ ಪರಿಹರಿಸಲು ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments