ಮಂಗಳೂರು| ಮಕ್ಕಳ ಮಾರಾಟ: 5 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ ದಂಡ 

Spread the love

ಮಂಗಳೂರು| ಮಕ್ಕಳ ಮಾರಾಟ: 5 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ ದಂಡ 

ಮಂಗಳೂರು: ಮಕ್ಕಳ ಮಾರಾಟವು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅನಧಿಕೃತವಾಗಿ ಯಾವುದೇ ಮಗುವನ್ನು ನೀಡುವುದು ಮತ್ತು ಪಡೆಯುವುದು ಸಂಪೂರ್ಣವಾಗಿ ಕಾನೂನು ಬಾಹಿರವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಎಚ್ಚರಿಸಿದೆ.

ಬಾಲನ್ಯಾಯ ಕಾಯ್ದೆ- 2015ರ ಸೆಕ್ಷನ್ 81ರ ಅನ್ವಯ ಮಕ್ಕಳನ್ನು ಮಾರುವವರಿಗೆ ಹಾಗೂ ಕೊಳ್ಳುವವರಿಗೆ 5 ವರ್ಷಗಳವರೆಗೆ ಸೆರೆಮನೆ ವಾಸದೊಂದಿಗೆ 1ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ. ಈ ಅಪರಾಧದಲ್ಲಿ ಆಶ್ರಯ ನೀಡಿದವರು ಶಾಮೀಲಾಗಿದ್ದರೆ, ಶಿಕ್ಷೆಯ ಅವಧಿ 3 ವರ್ಷಗಳಿಗೆ ಕಡಿಮೆ ಇಲ್ಲದಂತೆ 7 ವರ್ಷಗಳವರೆಗೆ ವಿಸ್ತರಣೆಗೊಳ್ಳಲಿದೆ.

ಅನಾಥ ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳ ಮಾಹಿತಿ ಕಂಡುಬಂದಲ್ಲಿ ಅಥವಾ ಮಗುವನ್ನು ದತ್ತು ಪಡೆಯಲು ಅಪೇಕ್ಷಿಸುವ ಪೋಷಕರು ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ ಮತ್ತು ಪಡೀಲ್ ಪ್ರಜಾಸೌಧದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ದೂರವಾಣಿ ಸಂಖ್ಯೆ:0824-2440004 ಮಕ್ಕಳ ಸಹಾಯವಾಣಿ-1098, ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಂಗಳೂರು-0824-2484547, ರಾಮಕೃಷ್ಣ ಸೇವಾ ಸಮಾಜ ಪುತ್ತೂರು 08251-230016 ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments