Spread the love
ಕುದ್ಮಲ್ ರಂಗರಾವ್ ಸಮಾಧಿ, ಉದ್ಯಾನವನ ಅಭಿವೃದ್ಧಿಗೆ ಮುಡಾ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ನಗರದ ಬಾಬುಗುಡ್ಡೆಯಲ್ಲಿರುವ ಸಮಾಜ ಸುಧಾರಕ ಕುದ್ಮಲ್ ರಂಗರಾವ್ ಅವರ ಸಮಾಧಿ ಹಾಗೂ ಕುದ್ಮಲ್ ರಂಗರಾವ್ ಉದ್ಯಾನವನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕುದ್ಮಲ್ ರಂಗರಾವ್ ಅವರ ಸ್ಮರಣೆಯನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ಸಮಾಧಿ ಸ್ಥಳ ಮತ್ತು ಉದ್ಯಾನವನವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಕುರಿತು ಅವರು ಪರಿಶೀಲನೆ ನಡೆಸಿದರು. ಅಲ್ಲದೆ, ಅವರ ಜೀವನ ಸಾಧನೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮ್ಯೂಸಿಯಂ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮುಡಾ ಅಧಿಕಾರಿಗಳು ಉಪಸ್ಥಿತರಿದ್ದರು.
Spread the love













