ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ

Spread the love

ಭಾರತ ಸೇವಾದಳ ವತಿಯಿಂದ ನೆಹರೂ ಜಯಂತಿ, ಮಕ್ಕಳ ದಿನಾಚರಣೆ

ಭಾರತ ಸೇವಾದಳ ವತಿಯಿಂದ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನಾಚರಣೆ ಹಾಗೂ ಮಕ್ಕಳ ದಿನಾಚರಣೆಯ ಕಾರ್ಯಕ್ರಮ  ನಗರದ ಪಾಂಡೇಶ್ವರದಲ್ಲಿರುವ ಯೂನಿಯನ್ ಬ್ಯಾಂಕ್ ಕಚೇರಿ ಎದುರುಗಡೆ ಇರುವ ನೆಹರೂ ಪ್ರತಿಮೆ ಬಳಿ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, ಪಂಡಿತ್ ನೆಹರೂರವರು ಅಧಿನಿಕ ಭಾರತದ ನಿರ್ಮಾತ್ರ. ಸುಮಾರು 16 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಪಂಚ ವಾರ್ಷಿಕ ಯೋಜನೆಯನ್ನು ಹುಟ್ಟು ಹಾಕಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡಿದ್ದಾರೆ. ಹಲವಾರು ವಿಶ್ವವಿದ್ಯಾನಿಲಯಗಳು, ಐಐಟಿ, ಬೃಹತ್ ಕೈಗಾರಿಕಾ ಉಧ್ಯಮಗಳು ದೇಶದೆಲ್ಲೆಡೆ ಪ್ರಾರಂಭವಾದವು. ಪ್ರಪಂಚದ ಇತರ ಬಲಿಷ್ಠ ರಾಷ್ಟ್ರಗಳ ಜೊತೆಗೆ ಭಾರತವನ್ನು ನಿಲ್ಲುವಂತೆ ಮಾಡಿದ್ದರು.

ಮಕ್ಕಳೆಂದರೆ ನೆಹರೂ ಅವರಿಗೆ ಪಂಚ ಪ್ರಾಣ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಸೇವಾದಳ ಮಕ್ಕಳ ಜೊತೆ ಇಂದು ಆಚರಿಸುವುದು ಎಲ್ಲಾ ಮಕ್ಕಳಿಗೆ ಸ್ಫೂರ್ತಿಯಾಗಿದೆ. ಆದ್ದರಿಂದ ಇಂದು ದೇಶದೆಲ್ಲೆಡೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ನೆಹರೂರವರ ಜನ್ಮದಿನದ ಪ್ರಯುಕ್ತ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು.

ಸೇವಾದಳದ ಕೇಂದ್ರ ಸಮಿತಿ ಸದಸ್ಯ ಬಶೀರ್ ಬೈಕಂಪಾಡಿ, ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್, ಪ್ರೇಮ್ ಚಂದ್, ಉದಯ ಕುಂದರ್, ಸುನಿಲ್ ದೇವಾಡಿಗ, ರವಿ, ಸಂಜೀವ, ರಾಕೇಶ್, ಶಾಲಾ ಶಿಕ್ಷಕಿಯರಾದ ಸುಮಾ, ಕಮಲಾ, ಮುಖ್ಯ ಸಂಘಟಕ ಮಂಜೇಗೌಡ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಂಗರೆ ಸಾಂಡ್ಸ್ ಪಿಟ್ ಸರಕಾರಿ ಶಾಲೆ ಮತ್ತು ಬಂದರ್ ನಲ್ಲಿರುವ ಸರಕಾರಿ ಶಾಲೆಯ ಮಕ್ಕಳು ಭಾಗವಹಿಸಿದರು.


Spread the love
Subscribe
Notify of

0 Comments