ಮಂಗಳೂರಿನಲ್ಲಿ ರಾತ್ರಿ ನಿರ್ಬಂಧ ತುಸು ಸಡಿಲಿಕೆ: ವ್ಯಾಪಾರ ವಹಿವಾಟಿಗೆ ಹೊಸ ಸಮಯ

Spread the love

ಮಂಗಳೂರಿನಲ್ಲಿ ರಾತ್ರಿ ನಿರ್ಬಂಧ ತುಸು ಸಡಿಲಿಕೆ: ವ್ಯಾಪಾರ ವಹಿವಾಟಿಗೆ ಹೊಸ ಸಮಯ

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹಿಂದಿಗಿಂತ ಉತ್ತಮ ಗೊಂಡಿರುವ ಹಿನ್ನೆಲೆಯಲ್ಲಿ ನೈಟ್ ಲೈಫ್ ಪೂರಕವಾಗಿ ನಿರ್ಬಂಧವನ್ನು ತುಸು ಸಡಿಲಿಸಲಾಗಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಎಲ್ಲಾ ವ್ಯಾಪಾರಿಕ ಸಂಸ್ಥೆಗಳು, ಅಂಗಡಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಟೀ ಸ್ಟಾಲ್ಗಳು, ‘ಪಾನ್ ಅಂಗಡಿಗಳು ಹಾಗೂ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು ಪ್ರತಿದಿನ ರಾತ್ರಿ 11.45ರ ವರೆಗೆ ಕೈಗೊಳ್ಳಬಹುದು. ರಾತ್ರಿ 11.45ರಿಂದ ಮಾರನೆ ದಿನ ಬೆಳಗ್ಗೆ 5.30ರ ವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ. ಆದರೆ ಸಿಎಲ್-4, ಸಿಎಲ್-6(ಎ), ಸಿಎಲ್-7 ಲೈಸೆನ್ಸ್ ಹೊಂದಿದವರಿಗೆ ಇದು ಅನ್ವಯಿಸುವುದಿಲ್ಲ ಅವರು ಲೈಸೆನ್ಸ್ನಲ್ಲಿ ನಿಗದಿಪಡಿಸಲಾದ ನಿಯಮಗಳನ್ನು ಪಾಲಿಸಬೇಕಾಗುತ್ತದೆ..

ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಉಪಯೋಗಿತಾ ಸೇವೆಗಳು ಹಾಗೂ ಸರಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ಪಡೆದ ಸಂಸ್ಥೆಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

ಮಂಗಳೂರು ನಗರವು ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಬಂದರು ನಗರವಾಗಿರು, ವಿವಿಧ ಧರ್ಮ, ಜಾತಿ ಮತ್ತು ಸಮುದಾಯಗಳ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಈ ಹಿಂದೆ ಕೆಲವು ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ರಾತ್ರಿ 10.30ರ ವರೆಗೆ ಮಾತ್ರವೇ ಅಂಗಡಿಗಳು ತೆರೆದಿರಬೇಕು, ಬಳಿಕ ಮುಚ್ಚಬೇಕು ಎಂದು ನಿರ್ಬಂಧಕ ಆದೇಶ ಹೊರಡಿಸಲಾಗಿತ್ತು. ಪ್ರಸ್ತುತ ಶಾಂತಿಯುತ ವಾತಾವರಣ ನೆಲೆಸಿರುವ ಹಿನ್ನೆಲೆಯಲ್ಲಿ ಒಂದೂಕಾಲು ಗಂಟೆಯಷ್ಟು ಹೆಚ್ಚುವರಿ ಅವಧಿಯನ್ನು ಸಡಿಲಿಸಿ ಆದೇಶಿಸಲಾಗಿದೆ

ಅದಾಗಿಯೂ ರಾತ್ರಿ ವೇಳೆಯಲ್ಲಿ ಜನರ ಅನಗತ್ಯ ಗುಂಪುಗೂಡುವಿಕೆ, ‘ಅನಗತ್ಯ ಓಡಾಟ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಹರಡುವ ವದಂತಿಗಳ ಪರಿಣಾಮವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುತ್ತವೆ. ವ್ಯಾಪಾರ ವಹಿವಾಟುಗಳು ರಾತ್ರಿ ಪೂರ್ತಿ ನಡೆಯುವುದರಿಂದ ಜನಸಂದಣಿ ಹೆಚ್ಚಾಗಿ, ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ 11.45ರಿಂದ ಬೆಳಗ್ಗೆ 5.30ರ ವರೆಗೆ ನಿರ್ಬಂಧಕ ಆದೇಶ ಜಾರಿಯಲ್ಲಿರುತ್ತದೆ.


Spread the love
Subscribe
Notify of

0 Comments